ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಾರಿ ಶತಕ ಬಾರಿಸಿದ ಕೊರೋನಾ

masthmagaa.com:

ಚಿಕ್ಕಮಗಳೂರು ಜಿಲ್ಲೆಯಲ್ಲಿಂದು ದಾಖಲೆಯ 125 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 916 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 30 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 461 ಸಕ್ರಿಯ ಪ್ರಕರಣಗಳಿದೆ.

ಇವತ್ತಿನ ಪ್ರಕರಣಗಳು:

ಚಿಕ್ಕಮಗಳೂರು – 86

ಕಡೂರು – 17

ತರೀಕೆರೆ – 14

ಎನ್.ಆರ್.ಪುರ – 3

ಮೂಡಿಗೆರೆ – 3

ಕೊಪ್ಪ – 1

ಶೃಂಗೇರಿ – 1

-masthmagaa.com

Contact Us for Advertisement

Leave a Reply