ಚೀನಾದಲ್ಲಿ ಬಾವಲಿ, ಚಿಪ್ಪು ಹಂದಿ, ನಾಯಿ ಮಾರಾಟ ಮತ್ತೆ ಆರಂಭ..!

masthmagaa.com:

ಇಡೀ ವಿಶ್ವದಲ್ಲಿ ಕೊರೋನಾ ವೈರಸ್​ ಸಾವಿನ ಓಟ ಮುಂದುರೆಸಿದ್ರೆ, ಚೀನಾದಲ್ಲಿ ಅದರ ಹಾವಳಿ ಬಹುತೇಕ ಕಡಿಮೆ ಆಗಿದೆ. ಈ ಹಿನ್ನೆಲೆ ಬಾವಲಿ, ಚಿಪ್ಪು ಹಂದಿ, ಇಲಿ ಹಾಗೂ ನಾಯಿಗಳನ್ನ ಮಾರಾಟ ಮಾಡುವ ಮಾರುಕಟ್ಟೆಗಳು ಮತ್ತೆ ಓಪನ್ ಆಗಿವೆ. ಇದು ತುಂಬಾ ಅಪಾಯಕಾರಿ ಅಂತ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್​, ಅಲ್ಲಿನ ಸೀ ಫುಡ್​ ಮಾರ್ಕೆಟ್​​​ನಿಂದ ಹರಡಿತ್ತು ಎನ್ನಲಾಗ್ತಿದೆ.  ಆರಂಭದಲ್ಲಿ ಬಾವಲಿಗೆ ಬಂದು, ನಂತರ ಚಿಪ್ಪು ಹಂದಿ ಮೂಲಕ ಮನುಷ್ಯನಿಗೆ ಈ ವೈರಸ್​ ತಗುಲಿತ್ತು ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದೀಗ ಅಂತಹ​ ಮಾರ್ಕೆಟ್​ಗಳು ಪುನಃ ಓಪನ್ ಆಗಿದ್ದು, ಮೊದಲಿನಂತೆಯೇ ಕೆಲಸ ಮಾಡ್ತಿರೋದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಮಾರ್ಕೆಟ್​ನಲ್ಲಿ ಪ್ರಾಣಿಗಳನ್ನು ಕಡಿದಿರುವ ಫೋಟೋಗಳನ್ನ ಯಾರೂ ತೆಗೆಯದಂತೆ ಪೊಲೀಸರನ್ನ ಕೂಡ ನಿಯೋಜಿಸಲಾಗಿದೆ.

ಸದ್ಯ ಕೊರೋನಾ ವೈರಸ್​ನಿಂದ ಜಾಗತಿಕವಾಗಿ 42,000 ಜನ ಮೃತಪಟ್ಟಿದ್ದು, 8 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಈ ಪೈಕಿ ಅಮೆರಿಕ ಒಂದರಲ್ಲೇ 2 ಲಕ್ಷ ಜನರಿಗೆ ಕಾಯಿಲೆ ಹರಡಿದ್ದು, 4 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply