ಮಹಾಮಾರಿಯ ಸೃಷ್ಟಿಕರ್ತ ವುಹಾನ್ ಈಗ ಕೊರೋನಾ ಮುಕ್ತ..!

masthmagaa.com:

ಇಡೀ ಜಗತ್ತಿಗೆ ಕೊರೋನಾ ಎಂಬ ಮಹಾಮಾರಿಯನ್ನು ಪರಿಚಯಿಸಿದ ಚೀನಾದ ವುಹಾನ್ ಪ್ರಾಂತ್ಯ ಈಗ ಅದರಿಂದ ಸಂಪೂರ್ಣ ಮುಕ್ತವಾಗಿದೆ. ವುಹಾನ್​​​ನಲ್ಲಿ ಡೆಡ್ಲಿ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು,  ಬುಧವಾರದಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. 2019ರ ಡಿಸೆಂಬರ್​​​ನಿಂದ ಇಲ್ಲಿವರೆಗೂ ಇಡೀ ವಿಶ್ವದಲ್ಲಿ 8 ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಮಹಾಮಾರಿ ಕೊರೋನಾದಿಂದ ವುಹಾನ್ ಹೊರ ಬಂದಿದ್ದು, ಅಲ್ಲಿನ ಜನರು ನಿಟ್ಟುಸಿರು ಬಿಡುವಂತಾಗಿದೆ.

ಆದ್ರೆ ಚೀನಾದ ಬೀಜಿಂಗ್​​​ನಲ್ಲಿ ಸೋಂಕು ಹಬ್ಬುವ ಸಾಧ್ಯತೆ ದಟ್ಟವಾಗಿದ್ದು ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿದೆ. ಮಾತ್ರವಲ್ಲದೆ ಪ್ರತಿಯೊಬ್ಬರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇಲ್ಲಿ ಬುಧವಾರ ಒಂದೇ ದಿನ 34 ಹೊಸ ಪ್ರಕರಣಗಳು ದಾಖಲಾಗಿವೆ. ಸದ್ಯ ಚೀನಾದಲ್ಲಿ ಕೊರೋನಾಗೆ 3,245 ಮಂದಿ ಬಲಿಯಾಗಿದ್ದು, 80,928 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ 70,420 ಮಂದಿ ಚೇತರಿಕೆ ಕಂಡಿದ್ದಾರೆ.

-masthmagaa.com

Contact Us for Advertisement

Leave a Reply