masthmagaa.com:

ತನ್ನ ದೇಶಕ್ಕೆ ಕೋರೋನಾನೇ ಬಂದಿಲ್ಲ ಅಂತಿರೋ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಆತನ ಕುಟುಂಬಕ್ಕೆ ಚಡ್ಡಿದೋಸ್ತ್ ಚೀನಾ ಕೊರೋನಾ ಲಸಿಕೆ ಕಳುಹಿಸಿಕೊಟ್ಟಿದೆ. ಚೀನಾದಲ್ಲಿ ಹಲವು ಲಸಿಕೆಗಳು ಕೊನೇ ಹಂತದ ಮಾನವ ಪ್ರಯೋಗ ನಡೆಸುತ್ತಿವೆ. ಇದರಲ್ಲಿ ಯಾವ ಲಸಿಕೆ ಅನ್ನೋದು ಬಹಿರಂಗವಾಗಿಲ್ಲ. ಅಲ್ಲದೆ ಆ ಲಸಿಕೆ ಸೇಫಾ ಅನ್ನೋದು ಕೂಡ ಗೊತ್ತಾಗಿಲ್ಲ. ಚೀನಾ ಕಳಿಸಿಕೊಟ್ಟಿರುವ ಲಸಿಕೆಯನ್ನ ಕಿಮ್ ಜಾಂಗ್ ಉನ್, ಆತನ ಕುಟುಂಬ ಮತ್ತು ಕೆಲ ಹಿರಿಯ ಅಧಿಕಾರಿಗಳಿಗೆ ಹಾಕಲಾಗುತ್ತೆ ಅಂತ ವರದಿಯಾಗಿದೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾ ಮತ್ತು ರಷ್ಯಾ ದೇಶದ ಹ್ಯಾಕರ್​ಗಳು ಭಾರತ ಸೇರಿದಂತೆ ಹಲವು ದೇಶಗಳ ಕೊರೋನಾ ಲಸಿಕೆ ಬಗ್ಗೆಗಿನ ಮಾಹಿತಿ ಕದಿಯಲು ಪ್ರಯತ್ನಿಸಿದ್ದವು ಅಂತ ವರದಿಯಾಗಿತ್ತು. ಅಷ್ಟೆಲ್ಲಾ ಕಷ್ಟ ಯಾಕೆ ಪಡ್ತೀರಾ ಅಂತ ಬಹುಶಃ ಚೀನಾನೇ ಲಸಿಕೆ ಕಳಿಸಿಕೊಟ್ಟಿರಬಹುದು.

ಉತ್ತರ ಕೊರಿಯಾದಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ ಅಂತ ಅಲ್ಲಿನ ಸರ್ಕಾರ ಹೇಳ್ತಿದೆ. ಆದ್ರೆ ಚೀನಾ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವ ಉತ್ತರ ಕೊರಿಯಾದಲ್ಲಿ ಕೊರೋನಾ ಸೋಂಕು ಹರಡಿರೋದನ್ನ ತಳ್ಳಿ ಹಾಕುವಂತಿಲ್ಲ ಅಂತ ದಕ್ಷಿಣ ಕೊರಿಯಾ ಹೇಳ್ತಿದೆ.

-masthmagaa.com

Contact Us for Advertisement

Leave a Reply