ಕಿಮ್ ಜೀವ ಉಳಿಸಲು ಚೀನಾ ವೈದ್ಯರ ತಂಡ ರವಾನೆ..!

masthmagaa.com:

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಚೀನಾದ ತಜ್ಞ ವೈದ್ಯರನ್ನ ಒಳಗೊಂಡ ತಂಡವೊಂದು ಉತ್ತರ ಕೊರಿಯಾಗೆ ರವಾನೆಯಾಗಿದೆ ಅಂತ ರಾಯ್ಟಿರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ಸಂಪರ್ಕ ವಿಭಾಗದ ಸದಸ್ಯರೊಬ್ಬರು ಈ ತಂಡದ ನೇತೃತ್ವ ವಹಿಸಿದ್ದಾರೆ.

ಏಪ್ರಿಲ್ 12ರಂದು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಉನ್ ನಂತರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ಆರೋಗ್ಯ ಗಂಭೀರವಾಗಿದೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದ್ರೆ ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಈಗ ಚೀನಾ ವೈದ್ಯರ ತಂಡ ಕೂಡ ಉತ್ತರ ಕೊರಿಯಾಗೆ ದೌಡಾಯಿಸಿರೋದು ಮತ್ತಷ್ಟು ಅನುಮಾನ ಮೂಡಿಸಿದೆ.
-masthmagaa.com
Contact Us for Advertisement

Leave a Reply