ಕೊರೋನಾ ಹುಟ್ಟಿದ ದೇಶದಲ್ಲೇ ಮೊದಲು ರೆಡಿಯಾಗುತ್ತಾ ಲಸಿಕೆ..?

masthmagaa.com:

ಇನ್ನು ಚೀನಾದ ಸಿಎನ್​ಬಿಜಿ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆ ಮೊದಲೆರಡು ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಇದನ್ನ ಪಡೆದ ಎಲ್ಲಾ ಸ್ವಯಂಸೇವಕರ ದೇಹದಲ್ಲಿ ಸೋಂಕಿನ ವಿರುದ್ಧ ರೋಗ ನಿರೋಧಕ ವ್ಯವಸ್ಥೆ ರೂಪುಗೊಂಡಿದೆ. ಅಲ್ಲದೆ ಯಾವುದೇ ಅಡ್ಡ ಪರಿಣಾಮ ಇಲ್ಲ ಅಂತ ಸಂಸ್ಥೆ ಹೇಳಿಕೊಂಡಿದೆ.

ಸುಮಾರು ಸಾವಿರಕ್ಕೂ ಅಧಿಕ ಸ್ವಯಂಸೇವಕರಿಗೆ ಈ ಲಸಿಕೆಯ ಎರಡು ಡೋಸ್​ಗಳನ್ನ ನೀಡಲಾಗಿತ್ತು. ಈ ಮೂಲಕ ಕೊರೋನಾ ಸೋಂಕಿಗೆ ಚೀನಾದವರೇ ಮೊದಲು ಲಸಿಕೆ ಕಂಡು ಹಿಡಿಯಬಹುದು ಎನ್ನಲಾಗ್ತಿದೆ.

ಚೀನಾದಲ್ಲಿ ಕಾಯಿಲೆಯ ಹೊಸ ಕೇಂದ್ರ ಬಿಂದುವಾಗ್ತಿರುವ ಬೀಜಿಂಗ್​ನಲ್ಲಿ ಮತ್ತೆ 31 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಕಳೆದ 6 ದಿನದಲ್ಲಿ 137 ಪ್ರಕರಣ ದೃಢಪಟ್ಟಂತಾಗಿದೆ. ಬಹುತೇಕ ಪ್ರಕರಣಗಳು ಕ್ಸಿನ್​ಫಾಡಿ ಹೋಲ್​ಸೇಲ್ ಮಾರುಕಟ್ಟೆಗೆ ಸಂಬಂಧಿಸಿದ್ದಾಗಿದೆ. ಕಾಯಿಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಬೀಜಿಂಗ್​ನಲ್ಲಿ 1,255 ವಿಮಾನಗಳ ಹಾರಾಟವನ್ನ ರದ್ದು ಮಾಡಲಾಗಿದೆ.

-masthmagaa.com

Contact Us for Advertisement

Leave a Reply