masthmagaa.com:;

ಕೊರೋನಾ ಸೋಂಕಿಗೆ  ಚೀನಾ ನ್ಯಾಷನಲ್ ಬಯೋಟೆಕ್​ ಗ್ರೂಪ್​ನ ಅಂಗಸಂಸ್ಥೆಯಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಸಂಸ್ಥೆಯು ಸಿನೋಫಾರ್ಮ್ ಕಂಪನಿ ಜೊತೆಗೆ ಸೇರಿಕೊಂಡು ಅಭಿವೃದ್ಧಿಪಡಿಸಿದ ಲಸಿಕೆಯ 3ನೇ ಹಂತದ ಪ್ರಯೋಗವನ್ನ ಯುಎಇನಲ್ಲಿ ನಡೆಸಲು ಅನುಮತಿ ಸಿಕ್ಕಿದೆ. ಚೀನಾದಲ್ಲಿ ಸೋಂಕಿತರ ಸಂಖ್ಯೆ ಕಮ್ಮಿ ಇರೋದ್ರಿಂದ ವಿದೇಶದಲ್ಲಿ ಈ ಲಸಿಕೆಯ ಪ್ರಯೋಗ ನಡೆಯುತ್ತಿದೆ.

ಈ ಲಸಿಕೆಯು ಮೊದಲ ಮತ್ತು ಎರಡನೇ ಹಂತದ ಪ್ರಯೋಗದಲ್ಲಿ ಸಾಕಷ್ಟು ಪರಿಣಾಮಕಾರಿ ಎನಿಸಿದೆ. ಅಲ್ಲದೆ ಯಾವುದೇ ಅಡ್ಡ ಪರಿಣಾಮ ಕೂಡ ಇಲ್ಲ ಅಂತ ಕಂಪನಿ ಹೇಳಿಕೊಂಡಿದೆ. ಹೀಗಾಗಿ ಈ ಲಸಿಕೆಯ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಇದುವರೆಗೆ ಯಾವುದೇ ಲಸಿಕೆಯು 3ನೇ ಹಂತದ ಪರೀಕ್ಷೆಯನ್ನ ಪೂರ್ಣಗೊಳಿಸಿಲ್ಲ.

masthmagaa.com

 

Contact Us for Advertisement

Leave a Reply