masthmagaa.com:

ಕೊರೋನಾ ವೈರಸ್​ಗೆ​ ಜಗತ್ತಿನಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಜೋರಾಗಿ ನಡೀತಿದೆ. ಈ ಪ್ರಯತ್ನದಲ್ಲಿ ಚೀನಿಯರು ಮುಂಚೂಣಿಯಲ್ಲಿದ್ದಂತೆ ಕಾಣ್ತಿದೆ. ಯಾಕಂದ್ರೆ ಚೀನಾದಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಒಟ್ಟು 8 ಲಸಿಕೆಗಳನ್ನ ಅಭಿವೃದ್ಧಿಪಡಿಸಲಾಗ್ತಿದೆ.

ಇದರಲ್ಲಿ ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್ (CNBG) ಇತ್ತೀಚೆಗೆ ಅಭಿವೃದ್ಧಿಪಡಿಸಿದ ಲಸಿಕೆಯೊಂದು ಮನುಷ್ಯರ ದೇಹದಲ್ಲಿ ವೈರಾಣು ವಿರುದ್ಧ ರೋಗ ನಿರೋಧಕ ವ್ಯವಸ್ಥೆ ಸಜ್ಜುಗೊಳಿಸುತ್ತೆ. ಜೊತೆಗೆ ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಅಂತ ಸಂಸ್ಥೆ ಹೇಳಿಕೊಂಡಿತ್ತು.

ಇದೀಗ ಅವರು ಅಭಿವೃದ್ಧಿಪಡಿಸಿದ ಎರಡನೇ ಲಸಿಕೆ ಕೂಡ ಸೇಫ್ ಮತ್ತು ಪರಿಣಾಮಕಾರಿ ಅಂತ ಮನುಷ್ಯನ ಮೇಲಿನ ಪ್ರಯೋಗದ ವೇಳೆ ಗೊತ್ತಾಗಿದೆ. ಸದ್ಯ ಈ ಎರಡೂ ಲಸಿಕೆಗಳ ಮೂರನೇ ಮತ್ತು ಕೊನೆಯ ಹಂತದ ಪ್ರಯೋಗವು ಸಾವಿರಾರು ಸ್ವಯಂಸೇವಕರ ಮೇಲೆ ನಡೆಯುತ್ತಿದೆ. ಇದು ಸಕ್ಸಸ್ ಆದ್ರೆ ಲಸಿಕೆಯು ಮಾರಾಟಕ್ಕೆ ಲಭ್ಯವಾಗಲಿದೆ.

-masthmagaa.com

Contact Us for Advertisement

Leave a Reply