masthmagaa.com:

ಪೂರ್ವ ಲಡಾಖ್​​ನಲ್ಲಿ ಭಾರತ-ಚೀನಾ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ವಾಸ್ತವ ನಿಯಂತ್ರಣ ರೇಖೆ (Line of Actual Control) ದಾಟಿ ಬಂದಿದ್ದ ಚೀನಾದ ಯೋಧನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಗಡಿ ದಾಟಿ ಬಂದಿದ್ದ ಈತ ಲಡಾಖ್ ಪೂರ್ವ ಭಾಗದ ಡೆಮ್​ಚೊಕ್​ ಎಂಬಲ್ಲಿ ಓಡಾಡುತ್ತಿದ್ದ. ತಕ್ಷಣ ಎಚ್ಚೆತ್ತ ಭಾರತೀಯ ಸೇನೆ ಆತನನ್ನು ವಶಕ್ಕೆ ಪಡೆದಿದೆ.

ಈತನನ್ನು ಚೀನಾ ಸೇನೆಯಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (PLA) ವಾಂಗ್ ಯಾ ಲಾಂಗ್ ಅಂತ ಗುರುತಿಸಲಾಗಿದೆ. ಈತ ದಾರಿ ತಪ್ಪಿ ಬಂದಿದ್ದ ಅಂತ ಭಾರತೀಯ ಸೇನೆ ಹೇಳಿದೆ. ಸದ್ಯ ಈತನಿಗೆ ವೈದ್ಯಕೀಯ ನೆರವು, ಆಹಾರ ಮತ್ತು ಗಡಿಯಲ್ಲಿ ವಿಪರೀತ ಚಳಿ ಇರೋದ್ರಿಂದ ಬಟ್ಟೆಯನ್ನ ನೀಡಲಾಗಿದೆ.

ನಾಪತ್ತೆಯಾಗಿರುವ ಯೋಧನ ಬಗ್ಗೆ ಚೀನಾ ಸೇನೆ ಭಾರತೀಯ ಸೇನೆಯ ಜೊತೆ ಮಾಹಿತಿ ಹಂಚಿಕೊಂಡಿದೆ. ವಶಕ್ಕೆ ಪಡೆದಿರುವ ಚೀನಾ ಯೋಧನನ್ನು ಈಗಿರುವ ನಿಯಮಗಳ ಪ್ರಕಾರ ಚುಸುಲ್-ಮೋಲ್ಡೊದಲ್ಲಿರುವ ಮೀಟಿಂಗ್ ಪಾಯಿಂಟ್​ನಲ್ಲಿ ಚೀನಾಗೆ ಒಪ್ಪಿಸಲಾಗುತ್ತದೆ ಅಂತ ಭಾರತೀಯ ಸೇನೆ ತಿಳಿಸಿದೆ.

-masthmagaa.com

Contact Us for Advertisement

Leave a Reply