ವಿದ್ಯುತ್‌ ದರ ಹೆಚ್ಚಳ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ ಎಂದ ಸಿದ್ದರಾಮಯ್ಯ!

masthmagaa.com:

ರಾಜ್ಯದ ಜನತೆಗೆ ವಿದ್ಯುತ್‌ ದರ ಏರಿಕೆ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಪ್ರಸಕ್ತ ಸಾಲಿನ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ವಿದ್ಯುತ್‌ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. KERC ಮೇ 12ರಂದು ಹೊರಡಿಸಿದ ಆದೇಶದ ಪ್ರಕಾರ, ಗ್ರಾಹಕರು ಬಳಸಿದ 100 ಯುನಿಟ್‌ವರೆಗಿನ ವಿದ್ಯುತ್ ಪ್ರತಿ ಯುನಿಟ್‌ಗೆ 4.15 ರೂಪಾಯಿ ವಿಧಿಸಲಾಗುತ್ತದೆ. 100 ಯುನಿಟ್‌ ಮೀರಿದರೆ ಬಳಸಿದ ಅಷ್ಟೂ ವಿದ್ಯುತ್‌ ಪ್ರತಿ ಯುನಿಟ್‌ಗೆ 7 ರೂಪಾಯಿ ವಿಧಿಸಲಾಗುತ್ತದೆ. ಹೀಗಾಗಿ ಜುಲೈ ತಿಂಗಳಲ್ಲಿ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 7 ರೂಪಾಯಿ ದರ ಲೆಕ್ಕ ಹಾಕಿ ಬಿಲ್‌ ನೀಡಲಾಗಿದೆ ಅಂತ ಬೆಸ್ಕಾಂ ತಿಳಿಸಿದೆ. ಇನ್ನು ವಿದ್ಯುತ್‌ ದರ ಏರಿಕೆ ಪ್ರಸ್ತಾಪವನ್ನ ಎಸ್ಕಾಂಗಳು KERC ಮುಂದೆ ಮೊದಲೇ ಇಟ್ಟಿದ್ದರು ಆದ್ರೆ ಚುನಾವಣೆ ಇದ್ದ ಕಾರಣ ಅನುಮೋದನೆ ನೀಡಿರಲಿಲ್ಲ. ಚುನಾವಣೆ ರಿಸಲ್ಟ್‌ ಬರೋಕೆ ಒಂದು ದಿನ ಮುಂಚೆ ದರ ಏರಿಕೆಗೆ ಒಪ್ಪಿಗೆ ನೀಡಲಾಗಿದೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಕಡಿಮೆ ವಿದ್ಯುತ್‌ ಬಳಸೋರಿಗೆ ಕಡಿಮೆ ದರ, ಹೆಚ್ಚು ಬಳಸೋರಿಗೆ ಪ್ರತಿ ಯುನಿಟ್‌ಗೆ ಹೆಚ್ಚಿನ ದರದಲ್ಲಿ ಬಿಲ್‌ ಹಾಕಲಾಗ್ತಿತ್ತು. ಆದ್ರೆ ಇದೀಗ 4 ಹಂತಗಳಲ್ಲಿ ವಿಧಿಸುತಿದ್ದ ರೇಟನ್ನ 2 ಹಂತಕ್ಕೆ ಚೇಂಜ್‌ ಮಾಡಲಾಗಿದೆ. ಹೀಗಾಗಿ ಜೂನ್‌ ತಿಂಗಳಲ್ಲಿ ನೀಡಲಾದ ಕರೆಂಟ್‌ ಬಿಲ್‌ ಮೇ ತಿಂಗಳಿಗೆ ಹೋಲಿಸಿದೆ ಭಾರಿ ಹೆಚ್ಚಳವಾಗಿದೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ವಿದ್ಯುತ್‌ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿದ್ಯುತ್​ ದರ ಹೆಚ್ಚಳ ಮಾಡಿರೋದು ಬಿಜೆಪಿ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್​ ದರವನ್ನ ಹೆಚ್ಚಳ ಮಾಡಿಲ್ಲ. ವಿದ್ಯುತ್​ ದರ ಹೆಚ್ಚಳ ಬಗ್ಗೆ ಏಪ್ರಿಲ್‌ 1ರಂದೇ ತೀರ್ಮಾನ ಆಗಿತ್ತು ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply