masthmagaa.com:

ಜಾಗತಿಕ ಪಿಡುಗಾಗಿರೋ ಮಾರಣಾಂತಿಕ ಕೊರೋನಾ ವೈರಸ್ ಆರ್ಭಟ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಪ್ರತಿದಿನ ಸಾವಿರ ಲೆಕ್ಕದಲ್ಲಿ ಪತ್ತೆಯಾಗುತ್ತಿದ್ದ ಹೊಸ ಪ್ರಕರಣಗಳು ಈಗ ಲಕ್ಷದ ಗಡಿ ದಾಟುತ್ತಿದೆ. ಇಡೀ ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30 ಲಕ್ಷ ಸನಿಹ ತಲುಪಿದೆ. ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಪ್ರಕಾರ ಸದ್ಯ ಜಗತ್ತಿನಲ್ಲಿ 29,71,000 ಜನರಿಗೆ ಕಾಯಿಲೆ ಹರಡಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೋನಾ ಸೋಂಕಿತರು ಹಾಗೂ ಮೃತಪಟ್ಟವರಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಕಾಯಿಲೆ ಪೀಡಿತರ ಸಂಖ್ಯೆ 10 ಲಕ್ಷದತ್ತ ಮುನ್ನುಗ್ಗುತ್ತಿದೆ. 2ನೇ ಸ್ಥಾನದಲ್ಲಿ ಸ್ಪೇನ್​ ಇದ್ದು, ಇಟಲಿ, ಫ್ರಾನ್ಸ್ ಹಾಗೂ ಜರ್ಮನಿ ನಂತರದ ಸ್ಥಾನದಲ್ಲಿವೆ. ನಮ್ಮ ಭಾರತ ದೇಶ 28 ಸಾವಿರ ಸೋಂಕಿತರೊಂದಿಗೆ 16ನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಕೊರೋನಾ ಸೋಂಕಿತ ದೇಶಗಳು:

1. ಅಮೆರಿಕ: 9.65 ಲಕ್ಷ (54,800 ಸಾವು)

2. ಸ್ಪೇನ್: 2.26 ಲಕ್ಷ (23,100 ಸಾವು)

3. ಇಟಲಿ: 1.97 ಲಕ್ಷ (26,600 ಸಾವು)

4. ಫ್ರಾನ್ಸ್: 1.62 ಲಕ್ಷ (22,800 ಸಾವು)

5. ಜರ್ಮನಿ: 1.57 ಲಕ್ಷ (6,000 ಸಾವು)

6.  ಬ್ರಿಟನ್: 1.54 ಲಕ್ಷ (20,800 ಸಾವು)

7. ಟರ್ಕಿ: 1.10 ಲಕ್ಷ (2,800 ಸಾವು)

8. ಇರಾನ್: 90 ಸಾವಿರ (5,700 ಸಾವು)

9. ಚೀನಾ: 83 ಸಾವಿರ (4,632 ಸಾವು)

10. ರಷ್ಯಾ: 80 ಸಾವಿರ (747 ಸಾವು)

11. ಬ್ರೆಜಿಲ್: 63 ಸಾವಿರ (4,200 ಸಾವು)

12. ಕೆನಡಾ: 47 ಸಾವಿರ (2,600 ಸಾವು)

13. ಬೆಲ್ಜಿಯಂ: 46 ಸಾವಿರ (7,000 ಸಾವು)

14. ನೆದರ್​ಲ್ಯಾಂಡ್: 38 ಸಾವಿರ (4,500 ಸಾವು)

15. ಸ್ವಿಜರ್​​ಲ್ಯಾಂಡ್: 29 ಸಾವಿರ (1,600 ಸಾವು)

16. ಭಾರತ: 28 ಸಾವಿರ (884 ಸಾವು)

17. ಪೆರು: 27 ಸಾವಿರ (720 ಸಾವು)

18. ಪೋರ್ಚುಗಲ್: 23 ಸಾವಿರ (900 ಸಾವು)

19. ಈಕ್ವೆಡಾರ್: 22 ಸಾವಿರ (576 ಸಾವು)

20. ಐರ್ಲ್ಯಾಂಡ್: 19 ಸಾವಿರ (1,087 ಸಾವು)

-masthmagaa.com

Contact Us for Advertisement

Leave a Reply