ರಿಲ್ಯಾಕ್ಸ್ ಮೂಡ್​ನಲ್ಲಿ ರಾಗಾ..! ಜನರ ಮಧ್ಯೆ ಕುಳಿತು ಚಾಟ್ಸ್​ ಬ್ಯಾಟಿಂಗ್​..!

ದೆಹಲಿ: ಹರಿಯಾಣ, ಮಹಾರಾಷ್ಟ್ರ ಚುನಾವಣೆ ಬಳಿಕ ಫುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಯಾವಾಗಲೂ ಎಸ್​ಪಿಜಿ ಭದ್ರತೆಯೊಂದಿಗೆ ಹೊರಗೆ ಹೋಗೋ ಅವರು ಇವತ್ತು ಒಬ್ಬರೇ ವ್ಯಾಗನರ್ ಕಾರ್​ನಲ್ಲಿ ದೆಹಲಿಯ ಬಂಗಾಳಿ ಬಜಾರ್​​ಗೆ ಭೇಟಿ ನೀಡಿದ್ದಾರೆ. ಬಂಗಾಳಿ ಮಾರ್ಕೆಟ್ ಚಾಟ್ ಮತ್ತು ಸ್ವೀಟ್ಸ್​​ಗಳಿಗೆ ಫೇಮಸ್ ಜಾಗವಾಗಿದೆ. ಟೀಶರ್ಟ್​ ಧರಿಸಿ ಸುತ್ತಾಡಲು ಹೊರಟ ರಾಹುಲ್ ಗಾಂಧಿ, ಬಂಗಾಳಿ ಬಜಾರ್​​ನ ಹೋಟೆಲ್​​ನಲ್ಲಿ ಎಲ್ಲರ ನಡುವೆಯೇ ಕುಳಿತು ಚಾಟ್ ತಿಂದು ಎಂಜಾಯ್ ಮಾಡಿದ್ರು. ಸುಮಾರು ಅರ್ಧ ಗಂಟೆಗಳ ಕಾಲ ರಾಹುಲ್ ಗಾಂಧಿ ಅಲ್ಲೇ ಇದ್ದರು.

ಇಲ್ಲಿ ಅರವಿಂದ್ ಕೇಜ್ರಿವಾಲ್, ಅನುಪಮ್ ಕೇರ್ ಸೇರಿದಂತೆ ಹಲವಾರು ರಾಜಕಾರಣಿಗಳು, ನಟರು ಬರುತ್ತಿರುತ್ತಾರೆ.

 

Contact Us for Advertisement

Leave a Reply