ಈಗ ಕಾಂಗ್ರೆಸ್ ಮಮತಾ ಯುದ್ಧ! ರಾಹುಲ್ ಫಾರಿನ್ ಹೋಗೋದು ಎಂಜಾಯ್ ಮಾಡಕ್ಕೆ: ಮಮತಾ ಬ್ಯಾನರ್ಜಿ

masthmagaa.com:

ಮೋದಿ ಮಮತಾ ಯುದ್ಧ ನೊಡಿ ಬೋರಾಗಿದ್ದ ದೇಶಕ್ಕೆ ಈಗ ಕಾಂಗ್ರೆಸ್ ಮಮತಾ ಯುದ್ಧದ ಎಂಟರ್ಟೇನ್ಮೆಂಟ್ ನೋಡೋ ಭಾಗ್ಯ. ನೀವು UPA ವಿರುದ್ಧ ಸೆಪರೇಟ್ ಒಕ್ಕೂಟ ಮಾಡ್ತೀರಾ ಅಂತ ಬಂದಾಗ? UPA ಎಲ್ಲಿದೆ? ಅದರ ಕತೆ ಮುಗಿದಿದೆ ಅಂತ ಹೇಳಿಕೆ ನೀಡಿದ್ದರು ಮಮತಾ. ಅಷ್ಟಕ್ಕೆ ಸುಮ್ಮನಾಗದೆ ಪದೇ ಪದೇ ಫಾರಿನ್ ಗೆ ಹೋಗಿ ಎಂಜಾಯ್ ಮಾಡೋ ರಾಹುಲ್ ಗಾಂಧಿಯಿಂದ ಮೋದಿ ವಿರುದ್ಧ ಸಮರ್ಥ ಪ್ರತಿಪಕ್ಷದ ಒಕ್ಕೂಟ ನಡೆಸಲು ಸಾಧ್ಯವಿಲ್ಲ ಅಂದಿದ್ದಾರೆ. ದೀದಿಯ ಈ ಅನಿರೀಕ್ಷಿತ ದಾಳಿಯಿಂದ ಮರ್ಮಾಘಾತವಾದಂತಾಗಿರೋ ಕಾಂಗ್ರೆಸ್ ನಾಯಕರು ಮಮತಾ ಮೇಲೆ ಆಲ್ ಔಟ್ ದಾಳಿಗೆ ಇಳಿದಿದ್ದಾರೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಂತೂ ನಮ್ ಹತ್ರ 20 ಪರ್ಸೆಂಟ್ ಫಿಕ್ಸ್ ಓಟಿದೆ. ಮಮತಾ ಹತ್ರ ಇರೋದು ಬರೀ 4 ಪರ್ಸೆಂಟ್. ಹೀಗಿರುವಾಗ ಅವ್ರು ನಮ್ಮನ್ನ ಬಿಟ್ಟು ಮೋದಿ ವಿರುದ್ಧ ಹೋರಾಡಲು ಸಾಧ್ಯನಾ ಅಂತ ಕೇಳಿದ್ದಾರೆ. ಮಮತಾ ಮೋದಿಯ ಮಾಹಿತಿದಾರರಂತೆ ಕೆಲಸ ಮಾಡ್ತಿದ್ದಾರೆ. ಮೋದಿ ಜೊತೆ ಒಳ ಒಪ್ಪಂದ ಮಾಡ್ಕೊಂಡು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳನ್ನ ವೀಕ್ ಮಾಡೋಕೆ ಟ್ರೈ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ ನಮ್ಮ ಪಕ್ಷ ಇಲ್ಲದೇ ಯಾವುದೇ ಮೈತ್ರಿಕೂಟ ಸಾಧ್ಯವಿಲ್ಲ ಅಂತ ಜೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply