ಕೊರೋನಾಗೆ ಬಲಿಯಾದ ಪೊಲೀಸ್​..!ಇವರಿಗೆ ಇಬ್ಬರು ಹೆಣ್ಣುಮಕ್ಕಳು….

masthmagaa.com:

ಮಧ್ಯಪ್ರದೇಶದಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಇಲ್ಲಿನ ಉಜ್ಜೈನ್​ನ  ನೀಲಗಂಗಾ ಪೊಲೀಸ್ ಠಾಣೆ ಮುಖ್ಯಸ್ಥ ಯಶ್ವಂತ್ ಪಾಲ್​​ ಕೊರೋನಾಗೆ ಬಲಿಯಾಗಿದ್ದಾರೆ. ಅಂಬರ್ ಕಾಲೋನಿ ಎಂಬ ಕಂಟೈನ್​​ಮೆಂಟ್ ಜೋನ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಯಶ್ವಂತ್​​ ಪಾಲ್​​ ಅವರಿಗೆ ಸೋಂಕು ತಗುಲಿತ್ತು. ಇಂದೋರ್​ನಲ್ಲಿರುವ ಅರವಿಂದೋ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 12 ದಿನಗಳ ಚಿಕಿತ್ಸೆ ಬಳಿಕವೂ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಇಂದು ಬೆಳಗ್ಗೆ 5 ಗಂಟೆಗೆ ಯಶ್ವಂತ್ ಪಾಲ್ ಮೃತಪಟ್ಟಿದ್ದಾರೆ. ಅವರ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಹೋಟೆಲ್​​​ ಒಂದರಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

-masthmagaa.com

Contact Us for Advertisement

Leave a Reply