ಸೋಂಕಿತರ ಸಂಖ್ಯೆ ಕಡಿಮೆಯಾದ್ರೂ ಸಾವಿನ ಪ್ರಮಾಣ ಜಾಸ್ತಿ!

masthmagaa.com:

ರಾಜ್ಯದಲ್ಲಿ ಲಾಕ್​ಡೌನ್ ಹೇರಿದ ಬಳಿಕ ಕೊರೋನಾ ಎರಡನೇ ಅಲೆ ಕಂಟ್ರೋಲ್​​ಗೇನೋ ಬರ್ತಾ ಇದೆ. ಅದೇ ರೀತಿ ಬೆಂಗಳೂರಲ್ಲೂ ಪ್ರತಿದಿನ ಪತ್ತೆಯಾಗ್ತಿರೋ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರು ಬಿಟ್ಟು ಉಳಿದಂತೆ ಇಡೀ ರಾಜ್ಯದ ಸಾವಿನ ಸರಾಸರಿ 2.62 ಪರ್ಸೆಂಟ್ ಇದ್ರೆ, ಬೆಂಗಳೂರಲ್ಲಿ ಸಾವಿನ ಸರಾಸರಿ 7.71 ಪರ್ಸೆಂಟ್ ಇದೆ. ಕಳೆದೊಂದು ತಿಂಗಳಲ್ಲಿ ಬೆಂಗಳೂರಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಡಬಲ್ ಆಗೋಗಿದೆ. ನಿನ್ನೆಯೂ ಅಷ್ಟೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ 320 ಮಂದಿಯಲ್ಲಿ 187 ಜನ ಬೆಂಗಳೂರಿಗರೇ ಆಗಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ವಾರ್ಡ್​​ಗಳಲ್ಲಿ ಶೇ80ರಷ್ಟು ಬೆಡ್​​​ಗಳು ಖಾಲಿ ಇವೆ, 50 ಪರ್ಸೆಂಟ್​ನಷ್ಟು ಆಕ್ಸಿಜನ್ ಬೆಡ್​​ಗಳು ಖಾಲಿ ಇವೆ. ಆದ್ರೆ ಐಸಿಯು ಬೆಡ್​​ಗಳು ಇನ್ನೂ ಕೂಡ 80 ಪರ್ಸೆಂಟ್​​ನಷ್ಟು ಭರ್ತಿಯಾಗಿದೆ ಅಂತ ತಜ್ಞರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply