masthmagaa.com:

ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 36,011ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 482 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 96.44 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,40,182 ಆಗಿದೆ. ದೇಶದಲ್ಲಿ ಸತತ 28 ದಿನಗಳಿಂದ 50,000ಕ್ಕೂ ಕಡಿಮೆ ಕೊರೋನಾ ಪ್ರಕರಣ ದೃಢಪಟ್ಟಂತಾಗಿದೆ. ಕಳೆದ 24 ಗಂಟೆಗಳಲ್ಲಿ 41,970 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 91 ಲಕ್ಷ ದಾಟಿದೆ.

ದೇಶದಲ್ಲಿ ಇನ್ನೂ ಕೂಡ 4.03 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಮಾಣ 94.37%ಗೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ 1.45% ಇದೆ. ಡಿಸೆಂಬರ್ 5ರಂದು 11.01ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 14.69 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

ಇದ್ರಲ್ಲಿ ಗುಡ್​​ನ್ಯೂಸ್​ ಏನಪ್ಪಾ ಅಂದ್ರೆ ಕಳೆದ 8 ದಿನಗಳಿಂದ ದೇಶದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವವರ ಪ್ರಮಾಣ ಜಾಸ್ತಿ ಇದೆ. ಜೊತೆಗೆ 138 ದಿನ ಅಂದ್ರೆ ಹೆಚ್ಚು ಕಡಿಮೆ ನಾಲ್ಕೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಷ್ಟು ಕಡಿಮೆಯಾಗಿದೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ಜುಲೈ 21ರಂದು 4.02 ಲಕ್ಷ ಸಕ್ರಿಯ ಪ್ರಕರಣಗಳಿದ್ದವು.

-masthmagaa.com

Contact Us for Advertisement

Leave a Reply