ಕೊರೋನಾ ಕಂಡು ಹಿಡಿದ ವೈದ್ಯನ ಕುಟುಂಬದ ಬಳಿ ಚೀನಾ ಕ್ಷಮೆಯಾಚನೆ

masthmagaa.com:

ಚೀನಾ: ಕೊರೋನಾ ವೈರಸ್ ಬಗ್ಗೆ ಮೊಟ್ಟ ಮೊದಲಿಗೆ ಮಾಹಿತಿ ನೀಡಿದ್ದ ಡಾ.ವೆನ್​ಲಿಯಾಂಗ್ ಅವರ ಕುಟುಂಬದ ಬಳಿ ಚೀನಾ ಕ್ಷಮೆಯಾಚಿಸಿದೆ. ಇವರು ಮೊಟ್ಟ ಮೊದಲಿಗೆ ಕೊರೋನಾ ವೈರಸ್ ಬಗ್ಗೆ ಎಚ್ಚರಿಸಿದ್ದರು. ಆದ್ರೆ ಇವರು ವದಂತಿ ಹಬ್ಬಿಸುತ್ತಿದ್ದಾರೆ ಅಂತ ಅಧಿಕಾರಿಗಳು ಇವರನ್ನು ಸುಮ್ಮನಾಗಿಸಿದ್ದರು. ಆದ್ರೆ ನಂತರದಲ್ಲಿ ಡಾ.ವೆನ್​ಲಿಯಾಂಗ್ ಮಾತು ಸತ್ಯವಾಗಿ ಅವರು ಕೂಡ ಇದೇ ವೈರಸ್​​​ಗೆ ಸಾವನ್ನಪ್ಪಿದ್ದರು.

ಇದೀಗ ಚೀನಾ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿದ್ದು ಡಾ.ವೆನ್​​ಲಿಯಾಂಗ್ ಕುಟುಂಬದ ಬಳಿ ಕಮ್ಯೂನಿಸ್ಟ್ ಸರ್ಕಾರ ಕ್ಷಮೆಯಾಚಿಸಿದೆ. ಅಲ್ಲದೆ ಡಾ.ವೆನ್​ಲಿಯಾಂಗ್ ಅವರ ಎಚ್ಚರಿಕೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಚೀನಾ ಸರ್ಕಾರ ವಿಫಲವಾಗಿತ್ತು. ವೆನ್​ಲಿಯಾಂಗ್ ಕಾಯಿಲೆ ಬಗ್ಗೆ ಹೇಳಿದಾಗ ಅವರಿಗೆ ಬೆದರಿಕೆಯೊಡ್ಡಿ ಸುಮ್ಮನಿರುವಂತೆ ಮಾಡಲಾಗಿತ್ತು. ಅಂತಹ ಪೊಲೀಸರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply