ಕೊರೋನಾ ಯಾವ ಮಟ್ಟಿಗೆ ವಾಯುಮಾಲಿನ್ಯ ಕಡಿಮೆ ಮಾಡಿದೆ ಗೊತ್ತಾ..?

masthmagaa.com:

ಕೊರೋನಾ ವೈರಸ್ ಇಡೀ ವಿಶ್ವವನ್ನೇ ಕಾಡುತ್ತಿದ್ದು, ಈವರೆಗೆ 19 ಸಾವಿರ ಜನರನ್ನು ಬಲಿ ಪಡೆದುಕೊಂಡಿದೆ. ಆದ್ರೆ ಭಾರತ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳು ಈ ಕೊರೋನಾ ವೈರಸ್​​ನಿಂದ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಕಾಣುವ ಕನಸು ಕಾಣುತ್ತಿದೆ.

ಯೂರೋಪಿಯನ್ ಸ್ಪೇಸ್ ಏಜೆನ್ಸಿ ಪ್ರಕಾರ ಕೊರೋನಾ ವೈರಸ್ ಹಾವಳಿ ಶುರುವಾದ ಬಳಿಕ ಇಡೀ ವಿಶ್ವದಲ್ಲಿ ವಾಯುಮಾಲಿನ್ಯದ ಪ್ರಮಾಣ ತುಂಬಾ ಕಡಿಮೆಯಾಗಿದೆ. ವಾಯುಮಾಲಿನ್ಯ ತಡೆಗೆ ಚೀನಾ, ಅಮೆರಿಕಾ ಭಾರತದಂತಹ ದೊಡ್ಡ ದೊಡ್ಡ ರಾಷ್ಟ್ರಗಳು ದೀರ್ಘಕಾಲದಿಂದ ಪ್ರಯತ್ನಿಸುತ್ತಿವೆ. ಆದ್ರೆ ಕೊರೋನಾ ವೈರಸ್ ಕಣ್ಣು ಮಿಟುಕಿಸೋದ್ರಲ್ಲಿ ಈ ವಾಯುಮಾಲಿನ್ಯವನ್ನು ಕಡಿಮೆ ಮಾಡಿದೆ.

ಕೊರೋನಾ ವೈರಸ್​​ನಿಂದಾಗಿ ಜನ ರಸ್ತೆಗೆ ಬರೋದು ತುಂಬಾ ಕಡಿಮೆಯಾಗಿದೆ. ವಾಹನಗಳ ಓಡಾಟ ತುಂಬಾ ಕಡಿಮೆಯಾಗಿದ್ದು, ಬಾನಂಗಳದಲ್ಲಿ ಹೊಗೆ ಉಗುಳುವ ಕಾರ್ಖಾನೆಗಳು ಕೂಡ ಬಂದ್ ಆಗಿವೆ. ಹೀಗಾಗಿ ವಾಯು ಮಾಲಿನ್ಯ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಅಂತ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಹೇಳಿದೆ. ಅದಕ್ಕೆ 2 ಸೆಟಲೈಟ್ ಫೋಟೋಗಳ ಉದಾಹರಣೆಯನ್ನೂ ನೀಡಿದೆ. ಜನವರಿಯಲ್ಲಿ ತೆಗೆಯಲಾದ ಫೋಟೋದಲ್ಲಿ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಕಂಡು ಬಂದಿದೆ. ಅದರಲ್ಲೂ ಇಟಲಿಯಲ್ಲಿ ಹೆಚ್ಚಿನ ಪ್ರಮಾಣದ ವಿಷಕಾರಿ ಅನಿಲ ಇರೋದು ಕಂಡು ಬಂದಿದೆ.

हालत खराब मगर हवा हुई साफ, कोरोना के कहर का ऐसा भी है असर

ಅದೇ ಮಾರ್ಚ್​ 11ರಂದು ತೆಗೆಯಲಾದ ಫೋಟೋದಲ್ಲಿ ಇಟಲಿ ವಿಷಕಾರಿ ಅನಿಲದಿಂದ ಮುಕ್ತವಾಗಿ ಕಾಣಿಸುತ್ತಿದೆ. ಇಟಲಿಯಲ್ಲಿ ಕೊರೋನಾ ಹಾವಳಿ ಮಿತಿ ಮೀರಿರೋದ್ರಿಂದ ಜನ ಮನೆಯಿಂದ ಹೊರಗೆ ಬರುತ್ತಲೇ ಇಲ್ಲ. ಹೀಗಾಗಿ ಈ ಪ್ರಮಾಣದಲ್ಲಿ ವಾಯುಮಾಲಿನ್ಯ ಕಡಿಮೆಯಾಗಿದೆ.

हालत खराब मगर हवा हुई साफ, कोरोना के कहर का ऐसा भी है असर

ಇನ್ನು ಚೀನಾದಲ್ಲೂ ಅಷ್ಟೆ.. ಜನವರಿಯಲ್ಲಿ ತೆಗೆದ ಫೋಟೋದಲ್ಲಿ ಭಾರಿ ಪ್ರಮಾಣದಲ್ಲಿ ವಿಷಕಾರಿ ಅನಿಲ ಇರೋದು ಕಂಡು ಬಂದಿದೆ. ಅದೇ ಲಾಕ್​ಡೌನ್ ಬಳಿಕ ತೆಗೆದ ಫೋಟೋದಲ್ಲಿ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಇಳಿಕೆಯಾಗಿದೆ.

हालत खराब मगर हवा हुई साफ, कोरोना के कहर का ऐसा भी है असर

-masthmagaa.com

 

Contact Us for Advertisement

Leave a Reply