ಮಹಾರಾಷ್ಟ್ರದಿಂದ ಪಂಜಾಬ್​​​ಗೆ ಮರಳಿದ 173 ಸಿಖ್ ಭಕ್ತರಿಗೆ ಕೊರೋನಾ..!

masthmagaa.com:

ಮಹಾರಾಷ್ಟ್ರಕ್ಕೆ ಭೇಟಿ ನೀಡಿ ವಾಪಸ್ ಪಂಜಾಬ್​​ಗೆ ತೆರಳಿದ್ದ 173 ಮಂದಿ ಸಿಖ್ ಯಾತ್ರಿಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಲಾಕ್​ಡೌನ್​​ಗೂ ಮುನ್ನ ಪಂಜಾಬ್​ನಿಂದ ಸುಮಾರು 4 ಸಾವಿರ ಮಂದಿ ಸಿಖ್ಖರು ಮಹಾರಾಷ್ಟ್ರದ ನಾಂದೆಡ್​ನಲ್ಲಿರೋ ಗುರುದ್ವಾರ ಹಜುರ್ ಸಾಹಿಬ್​​ಗೆ ತೆರಳಿದ್ದರು. ಆದ್ರೆ ಮಾರ್ಚ್​​ 25ರಂದು ಲಾಕ್​ಡೌನ್ ಹೇರಿದ್ದರಿಂದ ಎಲ್ಲರೂ ಅಲ್ಲೇ ಸಿಲುಕಿದ್ದರು.

ಕೇಂದ್ರ ಗೃಹ ಇಲಾಖೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ನೀಡಿದ ಬಳಿಕ ಇವರಲ್ಲಿ 3,500 ಮಂದಿ ಏಪ್ರಿಲ್ 22ರ ಬಳಿಕ ಪಂಜಾಬ್​​ಗೆ ವಾಪಸ್ಸಾಗಿದ್ದರು. ಆದ್ರೆ ಪಂಜಾಬ್​​ ಸರ್ಕಾರ ಇವರನ್ನು ಹೋದ ಕೂಡಲೇ ಕ್ವಾರಂಟೈನ್​ನಲ್ಲಿ ಇಡಲಿಲ್ಲ. ಬದಲಾಗಿ 5 ದಿನಗಳ ಬಳಿಕ ಕ್ವಾರಂಟೈನ್​ನಲ್ಲಿ ಇಟ್ಟಿತ್ತು. ಇದೀಗ ಇವರಲ್ಲಿ 173 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಮತ್ತಷ್ಟು ಜನರಿಗೆ ಸೋಂಕು ಹರಡಿರೋ ಭೀತಿ ಎದುರಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು, ಮಹಾರಾಷ್ಟ್ರ ಸರ್ಕಾರ ಸಿಖ್ ಯಾತ್ರಿಕರು ವಾಪಸ್ ಮರಳಲು ಸಹಾಯ ಮಾಡಲಿಲ್ಲ.. ಪರೀಕ್ಷೆಯನ್ನೂ ಮಾಡದೇ ಪಂಜಾಬ್​​ಗೆ ಮರಳಲು ಬಿಟ್ಟಿದೆ ಅಂತ ದೂರಿದ್ದಾರೆ.

ಆದ್ರೆ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿರೋ ವಿಪಕ್ಷ ಶಿರೋಮಣಿ ಅಕಾಲಿ ದಳ, ಸಿಖ್ ಯಾತ್ರಿಕರನ್ನು ಕ್ವಾರಂಟೈನ್​​ಗೆ ಒಳಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈಗ ಮಹಾರಾಷ್ಟ್ರದ ತಮ್ಮದೇ  ಮೈತ್ರಿ ಸರ್ಕಾರದ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಈಗಿಂದೀಗಲೇ ಬಲ್ಬೀರ್ ಸಿಂಗ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.

-masthmagaa.com

Contact Us for Advertisement

Leave a Reply