ಭಾರತದಲ್ಲಿ 300ರ ಗಡಿದಾಟಿದ ಕೊರೋನಾ ಸೋಂಕಿತರ ಸಂಖ್ಯೆ..! ಹಿಂಗಾದ್ರೆ ಕಷ್ಟ…

masthmagaa.com:

ಭಾರತದಲ್ಲಿ ಕೊರೋನಾವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಈ ನಡುವೆ ನಿನ್ನೆ ಒಂದೇ ದಿನ 79 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕು ಪೀಡಿತರ ಸಂಖ್ಯೆ 300ರ ಗಡಿ ದಾಟಿದೆ. ಆರೋಗ್ಯ ಇಲಾಖೆ ಪ್ರಕಾರ ಭಾರತದಲ್ಲಿ ಈವರೆಗೆ 325 ಮಂದಿಗೆ ಸೋಂಕು  ತಗುಲಿದ್ದು, 24 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇಡೀ ದೇಶದಲ್ಲಿ ಈ ಸೋಂಕಿಗೆ ಐವರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ 63 ಮಂದಿ, ಕೇರಳದಲ್ಲಿ 40, ದೆಹಲಿಯಲ್ಲಿ 26 ಮಂದಿ, ಉತ್ತರ ಪ್ರದೇಶದಲ್ಲಿ 24, ಕರ್ನಾಟಕ, ತೆಲಂಗಾಣದಲ್ಲಿ 21 ಮಂದಿ ಕೊರೋನಾದಿಂದ ಬಳಲುತ್ತಿದ್ದಾರೆ.

ಇನ್ನು ಇಡೀ ವಿಶ್ವದಲ್ಲಿ ನೋಡೋದಾದ್ರೆ 3,07,000 ಮಂದಿಗೆ ಸೋಂಕು ತಗುಲಿದ್ದು, 13,049 ಮಂದಿ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply