ಐಸೋಲೇಷನ್​ ವಾರ್ಡ್​​ನಿಂದ ಎಸ್ಕೇಪ್ ಆಗಲು ಹೋಗಿ ವ್ಯಕ್ತಿ ಸಾವು..!

masthmagaa.com:

ಹರಿಯಾಣ: ಕೊರೋನಾ ವೈರಸ್ ಶಂಕಿತನೊಬ್ಬ  ಆಸ್ಪತ್ರೆಯ ಐಸೋಲೇಷನ್ ವಾರ್ಡ್​​ನಿಂದ ಎಸ್ಕೇಪ್ ಆಗಲು ಹೋಗಿ ಜೀವ ಬಿಟ್ಟಿದ್ದಾನೆ. ಹರಿಯಾಣದ ಕರ್ನಲ್​​ನಲ್ಲಿರುವ ಕಲ್ಪನಾ ಚಾವ್ಲಾ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ವರದಿಯಾಗಿದೆ.

ಪಾಣಿಪತ್ ಮೂಲದ ವ್ಯಕ್ತಿಯೊಬ್ಬರನ್ನು ಕೊರೋನಾ ಸೋಂಕಿರುವ ಶಂಕೆ ಮೇರೆಗೆ ಏಪ್ರಿಲ್ 1ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ಕಲ್ಪನಾ ಚಾವ್ಲಾ ಆಸ್ಪತ್ರೆಯ 6ನೇ ಮಹಡಿಯಲ್ಲಿರುವ ಐಸೋಲೇಷನ್ ವಾರ್ಡ್​ನಲ್ಲಿ ಇರಿಸಲಾಗಿತ್ತು. ಆದ್ರೆ ಇಂದು ಬೆಳಗಿನ ಜಾವ 4 ಗಂಟೆಗೆ ಈ ವ್ಯಕ್ತಿ ಬೆಡ್​ ಶೀಟ್ ಮತ್ತು ಪ್ಲಾಸ್ಟಿಕ್ ಶೀಟ್​​ಗಳ ಮೂಲಕ ಹಗ್ಗವೊಂದನ್ನು ರಚಿಸಿ, ಆಸ್ಪತ್ರೆಯಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದ್ರೆ ಈ ವೇಳೆ ಕೈ ಜಾರಿ ಬಿದ್ದು, ಸಾವನ್ನಪ್ಪಿದ್ದಾನೆ. ಈತನಿಗೆ ಕೊರೋನಾ ವೈರಸ್ ಇತ್ತಾ.. ಇಲ್ವಾ..? ಅನ್ನೋದು ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಅಂತ ವೈದ್ಯರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಕೊರೋನಾ ಶಂಕಿತನೊಬ್ಬ ದೆಹಲಿಯ ಏಮ್ಸ್ ಆಸ್ಪತ್ರೆಯ ಕಟ್ಟಡದಿಂದ ಹಾರಿ,  ಎಸ್ಕೇಪ್ ಆಗಲು ಯತ್ನಿಸಿದ್ದ. ಆದ್ರೆ ಕೆಲವೊಂದು ಮೂಳೆ ಮುರಿದಿದ್ದು, ಜೀವ ಉಳಿದಿದೆ.

-masthmagaa.com

Contact Us for Advertisement

Leave a Reply