ಟಿಕ್​​​ಟಾಕ್ ಮೂಲಕ ಭಾರತೀಯರ ದಾರಿ ತಪ್ಪಿಸ್ತಿದ್ದಾರಾ ಪಾಕಿಗಳು..?

masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್​​​ಡೌನ್ ಆದೇಶ ಹೊರಬಿದ್ಮೇಲೆ ಜನ ತುಂಬಾ ಫ್ರೀಯಾಗಿ ಇದ್ದಾರೆ. ಮನೇಲಿ ಮಾಡೋಕೆ ಏನೂ ಕೆಲ್ಸ ಇಲ್ಲದ ಕಾರಣಕ್ಕೆ ವಾಟ್ಸಾಪ್​ನಲ್ಲಿ ಏನಾದ್ರೂ ವದಂತಿ ಹರಡೋದು, ಟಿಕ್​ಟಾಕ್ ವಿಡಿಯೋ ಮಾಡೋದು ಮಾಡ್ತಿದ್ದಾರೆ. ಹೀಗಾಗಿ ವಾಟ್ಸಾಪ್, ಟಿಕ್ ಟಾಕ್ ವಿಡಿಯೋಗಳ ಸಂಖ್ಯೆ ಹೆಚ್ಚಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ ಬರೀ ಕೊರೋನಾ ಸಂಬಂಧ ವಿಡಿಯೋಗಳೇ ಹರಿದಾಡ್ತಿದ್ದು ಕಳೆದ 5 ದಿನಗಳಲ್ಲಿ, 30 ಸಾವಿರ ವಿಡಿಯೋಗಳು ಶೇರ್ ಆಗಿವೆ. ಹಿಂದಿ, ಉರ್ದು ಭಾಷೆಯ ವೀಡಿಯೋಗಳೇ ಹೆಚ್ಚು ಹರಿದಾಡ್ತಿದ್ದು ಎಲ್ಲವು ತಪ್ಪು ಮಾಹಿತಿ ಮೂಲಕ ಜನರ ದಾರಿ ತಪ್ಪಿಸುತ್ತಿವೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಸ್ಲಿಮರನ್ನೇ ಗುರಿಯಾಗಿಸಿ ವಿಡಿಯೋ ಮಾಡಲಾಗಿದ್ದು, ಮುಸ್ಲಿಂ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇಂಥ ವಿಡಿಯೋಗಳನ್ನು ಈಗಾಗಲೇ 1 ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ. ಬಹುತೇಕ ವಿಡಿಯೋಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅಡ್ಡಿಯಾಗಿದ್ದು, ಇದ್ರಿಂದ ಜಾಗೃತರಾಗಬೇಕೆಂದು ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದು ವಿಚಾರ ಅಂದ್ರೆ ಈ ವಿಡಿಯೋಗಳಲ್ಲಿ ಹೆಚ್ಚಿನ ವಿಡಿಯೋಗಳು ಪಾಕಿಸ್ತಾನ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು, ಭಾರತದಲ್ಲೇ ಚಿತ್ರೀಕರಿಸಿದಂತೆ ಬಿಂಬಿಸುವ ಪ್ರಯತ್ನ ನಡೆದಿದೆ ಅಂತ ತಿಳಿದುಬಂದಿದೆ. ಅಲ್ಲದೆ 22 ಪುಟಗಳ ವಿಸ್ತೃತ ವರದಿ ಸಿದ್ಧಪಡಿಸಿರುವ ದೆಹಲಿ ಪೊಲೀಸರು, ಗುಪ್ತಚರ ಇಲಾಖೆಗಳಿಗೆ ಹಸ್ತಾಂತರಿಸಿದ್ದಾರೆ.

-masthmagaa.com

Contact Us for Advertisement

Leave a Reply