ಯಾರಿದಂಲೂ ಸಾಧ್ಯವಾಗದ ಈ ಕೆಲಸ ಮಾಡಿದೆ ಕಣ್ಣಿಗೆ ಕಾಣದ ಕೊರೋನಾ…!

masthmagaa.com:

ಲಾಕ್​ಡೌನ್ ಬಳಿಕ ಇಡೀ ವಿಶ್ವದಾದ್ಯಂತ ವಾಯುಮಾಲಿನ್ಯ ಕಡಿಮೆಯಾಗಿದೆ. ಅದೇ ರೀತಿ ಉತ್ತರ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿಯೇ ಇದೆ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ವಾಯುಮಾಲಿನ್ಯ ಕಡಿಮೆಯಾಗಿದೆ ಅಂತ ನಾಸಾ ತಿಳಿಸಿದೆ. ನಾಸಾದ ಸೆಟಲೈಟ್ ಸೆನ್ಸಾರ್​ನಿಂದ ಈ ಮಾಹಿತಿ ಲಭ್ಯವಾಗಿದ್ದು, ಭಾರತದಲ್ಲಿ ಏರೋಸೋಲ್ ಪ್ರಮಾಣ ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕುಸಿದಿದೆ. ನಾಸಾದ ಯೂನಿವರ್ಸಿಟೀಸ್ ಸ್ಪೇಸ್​​ ರಿಸರ್ಚ್​ ಅಸೋಸಿಯೇಷನ್​ ಮುಖ್ಯಸ್ಥ ಪವನ್ ಗುಪ್ತಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಾಕ್​ಡೌನ್​ನಿಂದಾಗಿ ಹಲವು ಸ್ಥಳಗಳ ವಾಯುಮಂಡಲದಲ್ಲಿ ಬದಲಾವಣೆ ಉಂಟಾಗುತ್ತದೆ ಅನ್ನೋದು ನಮಗೆ ಗೊತ್ತಿತ್ತು. ಆದ್ರೆ ನಾನು ಏರೋಸೋಲ್ ಪ್ರಮಾಣ ಇಷ್ಟರ ಮಟ್ಟಿಗೆ ಕಡಿಮೆಯಾಗಿರೋದು ಈವರೆಗೆ ನೋಡೇ ಇರಲಿಲ್ಲ ಅಂತ ಹೇಳಿದ್ದಾರೆ. ಅಲ್ಲದೆ 2016ರಿಂದ 2020ರವರೆಗೆ ಪ್ರತಿವರ್ಷ ಈ ಸಮಯದಲ್ಲಿ ವಾಯುಮಾಲಿನ್ಯ ಯಾವ ಮಟ್ಟದಲ್ಲಿ ಇತ್ತು ಅನ್ನೋ ಬಗ್ಗೆ ಚಿತ್ರವನ್ನೂ ನಾಸಾ ನೀಡಿದೆ.

ದೇಶದಲ್ಲಿ ಲಾಕ್​ಡೌನ್ ಹೇರಲಾಗಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ. ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಇದ್ರಿಂದ ವಾಯು ಮಾಲಿನ್ಯ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

-masthmagaa.com

Contact Us for Advertisement

Leave a Reply