ದುಬೈನಿಂದ ಬಂದು ತಾಯಿಯ ತಿಥಿ ಊಟ ಹಾಕಿಸಿದ..! ಈಗ ಅವಸ್ಥೆ ನೋಡಿ…

masthmagaa.com:

ಮಧ್ಯಪ್ರದೇಶ: ದುಬೈನಿಂದ ಮರಳಿದ್ದ ವ್ಯಕ್ತಿ ಮತ್ತು ಆತನ ಕುಟುಂಬದ 11 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಸುರೇಶ್ ಎಂಬಾತ ಮಾರ್ಚ್​ 17ರಂದು ದುಬೈನಿಂದ ಮಧ್ಯಪ್ರದೇಶದ ಮೊರೆನಾ ಜಿಲ್ಲೆಗೆ ಆಗಮಿಸಿದ್ದ. ಅಲ್ಲದೆ ಈತ ತನ್ನ ಮೃತ ತಾಯಿಯ ಹೆಸರಲ್ಲಿ ಮಾರ್ಚ್​ 20ರಂದು ಭಾರಿ ಪ್ರಮಾಣದಲ್ಲಿ ಜನರನ್ನು ಸೇರಿಸಿ ಊಟ ಕೂಡ ಹಾಕಿಸಿದ್ದ. ಆತನ ತಾಯಿಯ ಅಂತ್ಯಸಂಸ್ಕಾರ ಮತ್ತು ತಿಥಿಯೂಟದ ಈ ಕಾರ್ಯಕ್ರಮದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.

ಮಾರ್ಚ್​ 25ರಂದು ಸುರೇಶ್​ರಲ್ಲಿ ಕೊರೋನಾ ವೈರಸ್​​ನ ಲಕ್ಷಣಗಳು ಪತ್ತೆಯಾಗಿವೆ. ಈತ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದಾಗ ಕೊರೋನಾ ಪರೀಕ್ಷೆ ನಡೆಸಲಾಯ್ತು. ಜೊತೆಗೆ ಸುರೇಶ್ ಮತ್ತು ಪತ್ನಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಯ್ತು. ಈ ಪರೀಕ್ಷೆಯಲ್ಲಿ ದಂಪತಿಗೆ ಕೊರೋನಾ ವೈರಸ್ ಇರೋದು ತಿಳಿದುಬಂದಿದೆ. ನಂತರ ಅವರ 23 ಮಂದಿ ಸಂಬಂಧಿಕರನ್ನೂ ಕ್ವಾರಂಟೈನ್ ಮಾಡಿ ಪರೀಕ್ಷೆ ನಡೆಸಲಾಗಿತ್ತು. ಇವರಲ್ಲಿ 10 ಮಂದಿಗೆ ಕೊರೋನಾ ವೈರಸ್ ಇರೋದು ಬೆಳಕಿಗೆ ಬಂದಿದೆ.

ಹೀಗಾಗಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ದಂಪತಿ ವಾಸಿಸುತ್ತಿದ್ದ ಕಾಲೋನಿಯ ಹಲವರನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿಗಾ ಇಡಲಾಗಿದೆ.

-masthmagaa.com

 

Contact Us for Advertisement

Leave a Reply