ಏಡ್ಸ್ ರೀತಿ ಶಾಶ್ವತವಾಗಿ ಉಳಿದುಕೊಳ್ಳಬಹುದು ಕೊರೋನಾ..!

masthmagaa.com:

ಇಡೀ ವಿಶ್ವದಲ್ಲಿ 2.90 ಲಕ್ಷ ಜನರನ್ನ ಬಲಿ ಪಡೆದಿರೋ ಕೊರೋನಾ ವೈರಸ್ ಯಾವತ್ತೂ ಹೋಗದೇ ಇರಬಹುದು ಅನ್ನೋ ಆಘಾತಕಾರಿ ವಿಚಾರವನ್ನ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ಲದೆ ಈ ಕಾಯಿಲೆಯು ಹೆಚ್​ಐವಿ ಏಡ್ಸ್ ರೀತಿ ಸಮಾಜದಲ್ಲಿ ಹಾಗೇ ಉಳಿದುಕೊಳ್ಳಬಹುದು ಅಂತ ಹೇಳಿದೆ. ಅಂದ್ರೆ ಜಗತ್ತಿನ ಕೆಲವೊಂದು ಭಾಗಗಳಲ್ಲಿ ಆಗಾಗ ಕಾಣಿಸಿಕೊಳ್ಳಬಹುದು ಅಂತ ಹೇಳಿದೆ.

ಈ ಕಾಯಿಲೆ ತಡೆಯೋದು ಒಂದು ಮೂನ್​ಶಾಟ್ ಇದ್ದಂತೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಪರಿಸ್ಥಿತಿಗಳ ತಜ್ಞ ಮೈಕ್ ರಯಾನ್ ಹೇಳಿದ್ದಾರೆ. ಮೂನ್​ಶಾಟ್ ಅನ್ನೋ ಪದದ ಅರ್ಥ ಗೊತ್ತಾದ್ರೆ ಈ ಕೊರೋನಾ ಕಾಯಿಲೆಯ ಹಾವಳಿ ಎಷ್ಟು ಭಯಾನಕವಾಗಿದೆ ಅನ್ನೋದು ಗೊತ್ತಾಗುತ್ತದೆ.

ಮೂನ್​ಶಾಟ್ ಅಂದ್ರೆ, ತಕ್ಷಣದಲ್ಲಿ ಯಾವುದೇ ಫಲಿತಾಂಶ ಅಥವಾ ಲಾಭದ ನಿರೀಕ್ಷೆ ಇಲ್ಲದೆ ಹಾಗೂ ನಿರ್ದಿಷ್ಟ ಅಡ್ಡಪರಿಣಾಮದ ಅರಿವೂ ಇಲ್ಲದೆ ಕೈಗೊಳ್ಳುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಅಂದ್ರೆ ಕೊರೋನಾ ವಿರುದ್ಧದ ಹೋರಾಟ ಕೂಡ ಇದೇ ರೀತಿ ಆಗಬಹುದು ಅನ್ನೋ ಅರ್ಥದಲ್ಲಿ ಮೈಕ್ ರಯಾನ್ ಹೇಳಿದ್ದಾರೆ.

ಅಲ್ಲದೆ ಒಂದ್ವೇಳೆ ಕೊರೋನಾಗೆ ಲಸಿಕೆ ಲಭ್ಯವಾದರೂ ಅದನ್ನು ತೊಡೆದು ಹಾಕಲು ದೊಡ್ಡ ಪರಿಶ್ರಮದ ಅಗತ್ಯ ಇದೆ.  ಈ ಕಾಯಿಲೆ ಯಾವತ್ತು ಹೋಗುತ್ತೆ ಅಂತ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಈ ಮಹಾಮಾರಿ ದೀರ್ಘಾವಧಿವರೆಗೆ ಅಥವಾ ಶಾಶ್ವತವಾಗಿ ಉಳಿಬಹುದು ಎಂದಿದ್ದಾರೆ.

-masthmagaa.com

Contact Us for Advertisement

Leave a Reply