ಭಾರತ 3ನೇ ಹಂತಕ್ಕೆ ಹೋಗಿಲ್ಲ..ಕೊರೋನಾ ಭೀತಿ ನಡುವೆ ಸಿಹಿಸುದ್ದಿ..

masthmagaa.com

ದೆಹಲಿ: ಭಾರತದಲ್ಲಿ ನಿರಂತರವಾಗಿ ಕೊರೋನಾ ವೈರಸ್ ಹರಡುತ್ತಿದ್ದರೂ ಒಂದು ಒಳ್ಳೆಯ ಸುದ್ದಿ ಬಂದಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​​ ನಡೆಸಿರೋ ಸಂಶೋಧನೆಯಿಂದ ಭಾರತದಲ್ಲಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡುತ್ತಿಲ್ಲ ಎಂದು ತಿಳಿದುಬಂದಿದೆ. ಅಂದ್ರೆ ಒಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾದರೆ, ಅವರಿಂದ ಇಡೀ ಪ್ರದೇಶದಲ್ಲಿ ಕೊರೋನಾ ಹರಡುತ್ತಿಲ್ಲ ಎಂದು ಐಸಿಎಂಆರ್ ತಿಳಿಸಿದೆ. ಇದ್ರಿಂದ ಭಾರತದಲ್ಲಿ ಕೊರೋನಾ ವೈರಸ್ ಇನ್ನೂ 3ನೇ ಹಂತಕ್ಕೆ ಬಂದಿಲ್ಲ ಎಂದು ಸ್ಪಷ್ಟವಾಗಿದೆ. ದಿನನಿತ್ಯವೂ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಸಮಯದಲ್ಲಿ ಈ ಸುದ್ದಿ ಸ್ವಲ್ಪ ಸಮಾಧಾನ ನೀಡಿದೆ.

ಕೊರೋನಾ ವೈರಸ್​ನಲ್ಲಿ ಒಟ್ಟು 4 ಹಂತಗಳಿದ್ದು, 3ನೇ ಹಂತಕ್ಕೆ ತಲುಪಿದ ಬಳಿಕ ಅದರ ಪ್ರಭಾವ ತುಂಬಾ ಜಾಸ್ತಿಯಾಗಿರುತ್ತೆ. ಸದ್ಯ ಭಾರತದಲ್ಲಿ ಈ ಮಹಾಮಾರಿ 3ನೇ ಹಂತಕ್ಕೆ ತಲುಪಿಲ್ಲ. ದೇಶದ ವಿವಿಧ ಭಾಗಗಳಿಂದ ಒಟ್ಟು 1000 ಸ್ಯಾಂಪಲ್​​ಗಳನ್ನು ಪಡೆದು ಐಸಿಎಂಆರ್ ಈ ಸಂಶೋಧನೆ ನಡೆಸಿತ್ತು. ಇದರಲ್ಲಿ ಕೊರೋನಾ ಪೀಡಿತರು ಒಂದೇ ವಿದೇಶದಿಂದ ಬಂದಿದ್ರು. ಅಥವಾ ವಿದೇಶದಿಂದ ಬಂದವರ ಸಂಪರ್ಕದಲ್ಲಿದ್ದರು ಅನ್ನೋದು ತಿಳಿದು ಬಂದಿದೆ. ಇದ್ರಿಂದ ಭಾರತದಲ್ಲಿ ಕೊರೋನಾ ಇನ್ನೂ 2ನೇ ಹಂತದಲ್ಲಿದೆ ಅನ್ನೋದು ಸಾಬೀತಾಗಿದೆ.

masthmagaa.com

Contact Us for Advertisement

Leave a Reply