ಕೊರೋನಾ ಎಫೆಕ್ಟ್​​: ಇನ್ಮುಂದೆ ಎಸಿ ರೈಲಲ್ಲಿ ಸಿಗಲ್ಲ ಬ್ಲಾಂಕೆಟ್​..!

masthmagaa.com:

ದೆಹಲಿ: ಕೊರೋನಾ ವೈರಸ್​​ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಪಶ್ಚಿಮ ರೈಲ್ವೆ ಎಸಿ ಕೋಚ್​ ರೈಲುಗಳಲ್ಲಿ ನೀಡಲಾಗುವ ಬ್ಲಾಂಕೆಟ್ ಮತ್ತು ಕರ್ಟನ್​​ಗಳನ್ನು ತೆಗೆಯುವಂತೆ ಆದೇಶಿಸಿದೆ. ಇವುಗಳನ್ನು ದಿನನಿತ್ಯವೂ ತೊಳೆಯುವುದಿಲ್ಲವಾದ್ದರಿಂದ ಈ ಆದೇಶ ನೀಡಿದೆ. ಜೊತೆಗೆ ಬೆಡ್​​ಶೀಟ್​, ಬೆಡ್​ ರೋಲ್​, ಟವಲ್, ದಿಂಬಿನ ಕವರ್​ಗಳನ್ನು ಪ್ರತಿನಿತ್ಯವೂ ತೊಳೆಯಬೇಕು ಎಂದು ಸೂಚಿಸಿದೆ. ಅಲ್ಲದೆ ಪ್ರಯಾಣಿಕರು ತಮ್ಮದೇ ಬೆಡ್​ಶೀಟ್​​ಗಳನ್ನು ತರಬೇಕು ಎಂದಿದೆ.

ಅಲ್ಲದೆ ಪ್ರತಿದಿನವೂ ಸಾವಿರಾರು ಜನ ಪ್ರಯಾಣಿಸುವುದರಿಂದ ಕೋಚ್​​ನ ಸೀಟು ಮತ್ತಿತ್ತರ ವಸ್ತುಗಳನ್ನು ಸಾವಿರಾರು ಜನ ಮುಟ್ಟುತ್ತಾರೆ. ಹೀಗಾಗಿ ಅವುಗಳನ್ನು ಆಗಾಗ ಸ್ವಚ್ಛಗೊಳಿಸಿ ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ.

ಇನ್ನು ಡೋರ್ ಹ್ಯಾಂಡಲ್‌, ಡೋರ್ ಲ್ಯಾಚ್‌, ಎಂಟ್ರಿ ಡೋರ್ ಹ್ಯಾಂಡಲ್‌, ಸೀಟ್ ಗಾರ್ಡ್, ಸ್ನ್ಯಾಕ್ ಟ್ರೇ, ವಿಂಡೋ ಗ್ಲಾಸ್, ವಿಂಡೋ ಗ್ರಿಲ್, ಬಾಟಲ್ ಇಡುವ ಜಾಗ, ಮೇಲಿನ ಸೀಟಿಗೆ ಹೋಗುವ ಮೆಟ್ಟಿಲುಗಳು, ಕರೆಂಟ್ ಸ್ವಿಚ್‌ಗಳು, ಚಾರ್ಜ್ ಪಾಯಿಂಟ್‌ಗಳು ಇತ್ಯಾದಿಗಳನ್ನು ಸೋಂಕು ನಿವಾರಕಗಳನ್ನು ಬಳಸಿ ಕ್ಲೀನ್ ಮಾಡುವಂತೆ ನಿರ್ದೇಶನ ನೀಡಲಾಗಿದೆ.

-masthmagaa.com

Contact Us for Advertisement

Leave a Reply