ಶೇ.50ರಷ್ಟು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಬೇಕು: ಕೇಂದ್ರ ಸರ್ಕಾರ ಆದೇಶ

masthmagaa.com:

ದೆಹಲಿ: ಕೊರೋನಾ ವೈರಸ್ ಭೀತಿಯ ನಡುವೆ ಕೇಂದ್ರ ಸರ್ಕಾರ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಿ ಮತ್ತು ಸಿ ಶ್ರೇಣಿಯ ಶೇ.50ರಷ್ಟು ನೌಕರರು ಪ್ರತಿದಿನವೂ ಕಚೇರಿಗೆ ಬರಬೇಕು. ಅದೇ ರೀತಿ ಉಳಿದ ಶೇ.50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂದು ತಿಳಿಸಿದೆ. ಅಲ್ಲದೆ ಕೆಲಸದ ಸಮಯದಲ್ಲೂ ಬದಲಾವಣೆ ಮಾಡೋದಾಗಿ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ತಿಳಿಸಿದೆ.

ಆದೇಶದಂತೆ ಕೆಲವು ನೌಕರರು ಕಚೇರಿಯಲ್ಲಿ ಮತ್ತು ಕೆಲವು ನೌಕರರು ಮನೆಯಿಂದಲೇ ಕೆಲಸ ಮಾಡಬೇಕು. ಈ ಆದೇಶ ಏಪ್ರಿಲ್ 4ರವರೆಗೆ ಅನ್ವಯವಾಗುತ್ತೆ. ಆದ್ರೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿರುವ ಸಿಬ್ಬಂದಿಗೆ ಈ ಆದೇಶ ಅನ್ವಯವಾಗೋದಿಲ್ಲ. ಅವರು ಎಂದಿನಂತೆ ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ಸಚಿವಾಲಯ ತಿಳಿಸಿದೆ.

ಕೆಲಸದ ಶಿಫ್ಟ್​​ಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 9ರಿಂದ ಸಂಜೆ 5.30, ಬೆಳಗ್ಗೆ 9.30 ಸಂಜೆ 6 ಮತ್ತು ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ.

-masthmagaa.com

6m2jcrqs

Contact Us for Advertisement

Leave a Reply