ಲಾಕ್​ಡೌನ್ ವೇಳೆಯೂ ಜೆಎನ್​ಯು ವಿದ್ಯಾರ್ಥಿಗಳ ಕಿರಿಕ್​..!

masthmagaa.com:

ದೆಹಲಿ: ದೇಶದಲ್ಲಿ ಲಾಕ್​ಡೌನ್ ಹೇರಲಾಗಿದ್ದು, ಯಾರಾದ್ರೂ ಅದನ್ನು ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಅಂತ ಜೆಎನ್​ಯು ಆಡಳಿತ ಮಂಡಳಿ ಎಚ್ಚರಿಸಿದೆ. ಲಾಕ್​ಡೌನ್ ಹೇರಿದ ಬಳಿಕ ಜೆಎನ್​ಯು ಸೇರಿದಂತೆ ದೇಶದ ಎಲ್ಲಾ ವಿವಿಗಳು, ಶಾಲಾ-ಕಾಲೇಜುಗಳು ಬಂದ್ ಆಗಿವೆ. ಅದ್ರೆ ಜೆಎನ್​ಯು ಕ್ಯಾಂಪಸ್​​​ನಲ್ಲಿ ಕೆಲವು ವಿದ್ಯಾರ್ಥಿಗಳು ಲಾಕ್​​ಡೌನ್ ನಿಯಮ ಉಲ್ಲಂಘಿಸುತ್ತಿದ್ದಾರೆ.

ಕೆಲ ವಿದ್ಯಾರ್ಥಿಗಳು ಕ್ಯಾಂಪಸ್​ನಿಂದ ಹೊರಹೋಗಲು ಯತ್ನಿಸಿದ್ದು, ಗಾರ್ಡ್​ಗಳು ತಡೆದಾಗ ಕಿರಿಕ್ ಮಾಡಿದ್ದಾರೆ. ಅಲ್ಲದೆ ನಾನು ಸೀನಿದ್ರೆ ಕೊರೋನಾ ಹರಡುತ್ತೆ ಹುಷಾರ್ ಎಂದು ಬೆದರಿಸಿದ್ದಾರೆ.

ಹೀಗಾಗಿ  ಜೆಎನ್‌ಯು ಕ್ಯಾಂಪಸ್ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆಗೆ  ಕುತ್ತು ತರುವಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ ಅಂತ ಎಚ್ಚರಿಸಲಾಗಿದೆ.

ಜೊತೆಗೆ ಲಾಕ್​ಡೌನ್ ಹಿನ್ನೆಲೆಯಲ್ಲಿ ವಿವಿಯ ಪ್ರವೇಶಾತಿ ಪರೀಕ್ಷೆಗೆ ಅಪ್ಲಿಕೇಶನ್​​ಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

-masthmagaa.com

 

Contact Us for Advertisement

Leave a Reply