ಕೊರೋನಾಗೆ ಪಾಕ್​ನಲ್ಲಿ ಮೊದಲ ಬಲಿ…184 ಮಂದಿಗೆ ಸೋಂಕು

masthmagaa.com:

ಪಾಕಿಸ್ತಾನ: ಕೊರೋನಾ ವೈರಸ್​​​​​ಗೆ ಈಗಾಗಲೇ ವಿಶ್ವದಾದ್ಯಂತ 7 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಪಕ್ಕದ ಪಾಕಿಸ್ತಾನದಲ್ಲಿ ಮೊದಲ ಬಲಿಯಾಗಿದೆ. ಇರಾನ್​​ನಿಂದ ಮರಳಿದ್ದ ಹಫೀಜಾಬಾದ್​​ ಮೂಲದ ವ್ಯಕ್ತಿಯೊಬ್ಬರು  ಸಾವನ್ನಪ್ಪಿದ್ದಾರೆ.

ಇವರನ್ನು ಇರಾನ್ ಮತ್ತು ತಫ್ಟಾನ್​ ಬಾರ್ಡರ್​​ನಲ್ಲಿ 2 ವಾರಗಳ ಕಾಲ ನಿರ್ಬಂಧಕ್ಕೆ ಒಳಪಡಿಸಲಾಗಿತ್ತು. ನಂತರ ಗಂಭೀರ ಸ್ಥಿತಿಗೆ ತಲುಪಿದ್ದ ಇವರನ್ನು ಲಾಹೋರ್​​ನ ಮಾಯೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇನ್ನು ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 90 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕು ಪೀಡಿತರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply