ಕೊರೋನಾ: ಸಾರ್ಕ್ ರಾಷ್ಟ್ರಗಳ ಒಗ್ಗಟ್ಟಿಗೆ ನಮೋ ಕರೆ…ಪಾಕ್ ಹೇಳಿದ್ದೇನು..?

masthmagaa.com

ಕೊರೋನಾ ವೈರಸ್ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಿ ವಿಶ್ವಕ್ಕೆ ಮಾದರಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ಕ್​​​​ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದರು. ಇದಕ್ಕೆ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್​ ಸೇರಿದಂತೆ ಹಲವು ರಾಷ್ಟ್ರಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ ಭೂತಾನ್ ಪ್ರಧಾನಿ ಲೊತೆಯ್ ಶೆರಿಂಗ್ ಅಂತೂ ನಾಯಕತ್ವ ಅಂದ್ರೆ ಇದು ಅಂತ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದರು.

ಆದ್ರೆ ಪಾಕಿಸ್ತಾನ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಎಲ್ಲರ ಕಣ್ಣು ಪಾಕಿಸ್ತಾನದ ಮೇಲೆಯೇ ಇತ್ತು. ಇದೀಗ ಕೊನೆಗೂ ಪಾಕಿಸ್ತಾನ ಮೌನ ಮುರಿದಿದ್ದು, ಪ್ರಧಾನಿ ಮೋದಿ ಕರೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಆಯಿಷಾ ಫಾರೂಖಿ, ಸಾರ್ಕ್​ ದೇಶಗಳ ನಾಯಕರ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗುವಂತೆ ನಮ್ಮ ಆರೋಗ್ಯ ಸಚಿವರಿಗೆ ತಿಳಿಸಿದ್ದೇವೆ ಎಂದಿದೆ. ಅಲ್ಲದೆ ಕೊರೋನಾ ವಿಚಾರದಲ್ಲಿ ಜಾಗತಿಕ ಮತ್ತು ಕ್ಷೇತ್ರೀಯ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

masthmagaa.com

Contact Us for Advertisement

Leave a Reply