ಸಚಿವರ ಜೊತೆ ಮೋದಿ ಮೀಟಿಂಗ್​! ಸೋಮವಾರದಿಂದ ರೈಲು, ವಿಮಾನ ಸೇವೆ..?

masthmagaa.com:

ಮೇ 3ಕ್ಕೆ ಲಾಕ್​ಡೌನ್ ಮುಗಿಯಲಿದ್ದು, ನಂತರದ ಪ್ಲಾನಿಂಗ್ ಬಗ್ಗೆ ಇವತ್ತು ಪ್ರಧಾನಿ ನರೇಂದ್ರ ಮೋದಿಯವರು ಗೃಹಸಚಿವ ಅಮಿತ್ ಶಾ ಜೊತೆ ಸಭೆ ನಡೆಸಿದ್ರು. ರೈಲ್ವೆ ಸಚಿವ ಪಿಯೂಷ್ ಗೋಯಲ್, ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್ ಪುರಿ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಸಭೆಯಲ್ಲಿ ಭಾಗಿಯಾಗಿದ್ದರು. ಮೇ 3ರ ಬಳಿಕ ವಿಮಾನ ಮತ್ತು ರೈಲ್ವೆ ಸೇವೆಯನ್ನು ಪುನಾರಂಭ ಮಾಡೋದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.

ಈ ವೇಳೆ ರೆಡ್​ ಜೋನ್​ಗಳಲ್ಲಿ ಲಾಕ್​ಡೌನ್ ಮುಂದುವರಿಸುವಂತೆಯೂ, ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವಂತೆಯೂ ಗೃಹ ಇಲಾಖೆ ಸಲಹೆ ನೀಡಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply