ವೈದ್ಯ ಸಿಬ್ಬಂದಿಯಿಂದಲೇ ಕೊರೋನಾಗೆ ಬಲಿಯಾದವನ ಅಂತ್ಯಸಂಸ್ಕಾರ..!

masthmagaa.com:

ತೆಲಂಗಾಣದಲ್ಲಿ 74 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್​​​ಗೆ ಬಲಿಯಾಗಿದ್ದಾರೆ. ಶನಿವಾರ ಸಾವನ್ನಪ್ಪಿದ ಇವರ ಮಾದರಿಗಳನ್ನು ಪಡೆದು ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಇದೀಗ ಮೃತ ವ್ಯಕ್ತಿಗೆ ಕೊರೋನಾ ಇದ್ದಿದ್ದು ತಿಳಿದುಬಂದಿದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಯೇ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ್ರು. ಕುಟುಂಬದ ಸದಸ್ಯರಿಗೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಅವಕಾಶವೂ ಸಿಗಲಿಲ್ಲ.

ಬೇರೆ ಕಾರಣದಿಂದಾಗಿ ಸಾವನ್ನಪ್ಪಿದ್ರೂ ಕೂಡ ಅಂತ್ಯಸಂಸ್ಕಾರದಲ್ಲಿ 20 ಮಂದಿಗಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂದು ಸೂಚಿಸಲಾಗಿದೆ.

ಈ ನಡುವೆ ತೆಲಂಗಾಣದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply