ಮಗನ ಶವಸಂಸ್ಕಾರವನ್ನು ಆನ್​ಲೈನ್ ಮೂಲಕ ನೋಡಿದ ತಾಯಿ..!

masthmagaa.com:

ಬ್ರಿಟನ್: ಜಗತ್ತಿನಾದ್ಯಂತ 60 ಸಾವಿರ ಮಂದಿ ಕೊರೋನಾ ವೈರಸ್​​​ಗೆ ಬಲಿಯಾಗಿದ್ದಾರೆ. ತಮ್ಮ ಸಂಬಂಧಿಕರನ್ನು ಕಳೆದುಕೊಂಡ ಜನ, ಅಂತ್ಯಸಂಸ್ಕಾರಕ್ಕೂ ತೆರಳಲು ಸಾಧ್ಯವಾಗದೇ ನೋವಿನಿಂದ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಕೊರೋನಾ ಪೀಡಿತರು ಸಾಯುವ ವೇಳೆಯೂ ಕುಟುಂಬಸ್ಥರನ್ನು ನೋಡಲು ಬಿಡುತ್ತಿಲ್ಲ. ಇದೇ ರೀತಿ ಬ್ರಿಟನ್​ನ ಬ್ರಿಕ್ಸನ್​​ ಮೂಲದ 13 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದು, ಆತನ  ತಾಯಿ ಮತ್ತು 6 ಮಂದಿ ಸಹೋದರ-ಸಹೋದರಿಯರನ್ನು ಐಸೋಲೇಷನ್​ನಲ್ಲಿ ಇಡಲಾಗಿದೆ. ಹೀಗಾಗಿ ಮೃತ ಬಾಲಕ ಇಸ್ಮಾಯಿಲ್ ಮೊಹ್ಮದ್ ಅಬ್ದುಲ್ ವಹಬ್ ಅವರ ಅಂತ್ಯಸಂಸ್ಕಾರವನ್ನು ವೈದ್ಯಕೀಯ ಸಿಬ್ಬಂದಿಯೇ ನೆರವೇರಿಸಿದ್ರು. ಇದನ್ನು ಐಸೋಲೇಷನ್​​ನಲ್ಲಿದ್ದ ತಾಯಿ ಆನ್​​ಲೈನ್​ ಮೂಲಕವೇ ವೀಕ್ಷಿಸಿದ್ರು.

-masthmagaa.com

Contact Us for Advertisement

Leave a Reply