ದೋಣಿಯಲ್ಲಿ ಕ್ವಾರಂಟೈನ್ ಮಾಡಿಕೊಂಡ ರೈತ..! ಇವರು ಎಲ್ಲರಿಗೂ ಮಾದರಿ…

masthmagaa.com:

ಪಶ್ಚಿಮ ಬಂಗಾಳ: ದೇಶವನ್ನು ಕೊರೋನಾ ವೈರಸ್ ಕಾಡುತ್ತಿದ್ದು, ತಮ್ಮನ್ನು ತಾವು ಕ್ವಾರಂಟೈನ್​ನಲ್ಲಿ ಇರಿಸಿಕೊಳ್ಳಿ ಎಂದು ಮನವಿ ಮಾಡಿದ್ರೂ ಜನ ಕೇಳ್ತಿಲ್ಲ. ಸೀಲ್ ಹೊಡೆದು ಕಳುಹಿಸಿದ್ರು ರೋಡಲ್ಲಿ ಓಡಾಡ್ತಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನನ್ನು ತಾನು ನದಿಯೊಂದರಲ್ಲಿ ಕ್ವಾರಂಟೈನ್​ ಮಾಡಿಕೊಂಡಿದ್ದಾನೆ.

ಪಶ್ಚಿಮ ಬಂಗಾಳದ ನಬದ್ವೀಪ ಮೂಲದ ರೈತ 65 ವರ್ಷದ ನಿರಂಜನ್ ಹಲ್ದಾರ್ ಕಳೆದ ತಿಂಗಳು ಮಾಲ್ಡಾದ ಸಂಬಂಧಿಕರ ಮನೆಗೆ ತೆರಳಿದ್ದರು. ಇಲ್ಲಿ ಅವರಿಗೆ ಕೆಮ್ಮು, ಶೀತ ಶುರುವಾಗಿದೆ. ಹೀಗಾಗಿ ವೈದ್ಯರ ಬಳಿ ಹೋಗಿ ಪರೀಕ್ಷೆ ನಡೆಸಿದ್ದಾರೆ. ಆಗ ವೈದ್ಯರು 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ. ಆದ್ರೆ ಸಂಬಂಧಿಕರು ಮನೆಗೆ ಸೇರಿಸಲೇ ಇಲ್ಲ. ತನ್ನ ಮನೆಗೆ ಹೋಗೋಣ ಅಂದ್ರೆ ಅದು 200 ಕಿಲೋಮೀಟರ್ ದೂರದ ನಬದ್ವೀಪದಲ್ಲಿದೆ.. ಅಲ್ಲದೆ ಲಾಕ್​ಡೌನ್ ಬೇರೆ ಹೇರಲಾಗಿತ್ತು.

ಹೀಗಾಗಿ ತನ್ನಿಂದ ಬೇರೆಯವರಿಗೆ ತೊಂದರೆಯಾಗಬಾರದು ಎಂದು ನಿರ್ಧರಿಸಿದ ರೈತ ಸೀದಾ ಭಾರತ ಮತ್ತು ಬಾಂಗ್ಲಾದೇಶ ನಡುವೆ ಇರುವ ತಂಗನ್ ನದಿಯಲ್ಲಿ ಒಂದು ದೋಣಿಯಲ್ಲೇ ವಾಸಿಸೋ ಮೂಲಕ ಬೇರೆ ಜನರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಇದೀಗ ಸರ್ಕಾರ ಕೂಡ ಲಾಕ್​ಡೌನ್ ಮುಗಿದ ಬಳಿಕ ನಿರಂಜನ್ ಹಲ್ದಾರ್​​​​ರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸೋದಾಗಿ ಭರವಸೆ ನೀಡಿದೆ.

-masthmagaa.com:

Contact Us for Advertisement

Leave a Reply