ಕೊರೋನಾ ಮದ್ದು ಕಂಡು ಹಿಡಿದ ವಿಜ್ಞಾನಿಗಳು..! ಇಲಿ ಮೇಲೆ ಪ್ರಯೋಗ…

masthmagaa.com:

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ವಿಶ್ವದ ಎಲ್ಲಾ ದೇಶಗಳು ಇದಕ್ಕೆ ಔಷಧ ಕಂಡು ಹಿಡಿಯಲು ಯತ್ನಿಸುತ್ತಿವೆ. ಈ ನಡುವೆ ಅಮೆರಿಕ ಒಂದು ಔಷಧ ಕಂಡು ಹಿಡಿದಿದ್ದು, ಇದರಿಂದ ಕೊರೋನಾ ಪೀಡಿತರು ಸಂಪೂರ್ಣವಾಗಿ ಗುಣಮುಖವಾಗದಿದ್ದರೂ ಕೊರೋನಾವನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ವಿಶ್ವದಲ್ಲಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನ ಈ ಕಾಯಿಲೆಗೆ ಒಳಗಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ಹೀಗಾಗಿ ಆದಷ್ಟು ಬೇಗ ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಇಂಥಾ ಸಮಯದಲ್ಲಿ ಪೆನ್ಸಿಲ್ವೇನಿಯಾ ಯೂನಿವರ್ಸಿಟಿ ಆಫ್​​ ಪಿಟ್ಸ್‌ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ವಿಜ್ಞಾನಿಗಳು ಸಾರ್ಸ್ ಮತ್ತು ಮಾರ್ಸ್​ ಆಧಾರದಲ್ಲಿ ಕೋವಿಡ್​-19ಗೆ ಔಷಧ ಕಂಡು ಹಿಡಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಫ್ರೊಫೆಸರ್ ಆಂಡ್ರಿಯಾ ಗ್ಯಾಂಬೊಟ್ಟೊ, ವೈರಸ್​​ನ್ನು ಕೊಲ್ಲೋದು ಹೇಗೆ..? ಸಾಯಿಸೋದು ಹೇಗೆ ಅನ್ನೋದನ್ನು ಪತ್ತೆಹಚ್ಚಿದ್ದೇವೆ. ನಾವು ಇಲಿಯೊಂದರ ಮೇಲೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಅಂತ ತಿಳಿಸಿದ್ದಾರೆ. ಇದಕ್ಕೆ ಪಿಟ್‌ಗೊವಾಕ್ ಎಂದು ಹೆಸರು ಕೂಡ ಇಡಲಾಗಿದೆ. ಈ ಔಷಧದ ಪ್ರಯೋಗದಿಂದ ಇಲಿಯ ದೇಹದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ನಿರ್ಮಾಣವಾಗಿದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply