ಭಾರತದಲ್ಲಿ ಒಂದೇ ವಾರದಲ್ಲಿ 2,100 ಮಂದಿಗೆ ಸೋಂಕು..67 ಮಂದಿ ಸಾವು..!

masthmagaa.com:

ಭಾರತದಲ್ಲಿ ಕೊರೋನಾ ವೈರಸ್ ತುಂಬಾ ತೀವ್ರಗತಿಯಲ್ಲಿ ಹರಡುತ್ತಿದೆ. ಈಗಾಗಲೇ 3,082 ಮಂದಿಗೆ ಸೋಂಕು ತಗುಲಿದ್ದು, 86 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 700 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಕೇಸ್ ದಾಖಲಾಗಿದ್ದು, 490 ಮಂದಿ ಕೊರೋನಾದಿಂದ ಬಳಲುತ್ತಿದ್ದಾರೆ. ಅಹಮದಾಬಾದ್ ನಲ್ಲಿ ಓರ್ವ ಸಾವನ್ನಪ್ಪಿದ್ದು, ಗುಜರಾತ್​​​ನಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇನ್ನು ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣದಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ.

ಕಳೆದ ಶನಿವಾರ ಭಾರತದಲ್ಲಿ ಸೋಂಕಿತರ ಸಂಖ್ಯೆ 900 ಮತ್ತು ಮೃತರ ಸಂಖ್ಯೆ 19 ಇತ್ತು. ಆದ್ರೆ ಒಂದೇ ವಾರದಲ್ಲಿ 2,100 ಸೋಂಕಿತರು ಪತ್ತೆಯಾಗಿದ್ದು, 67 ಮಂದಿ ಸಾವನ್ನಪ್ಪಿದಂತಾಗಿದೆ.

-masthmagaa.com

Contact Us for Advertisement

Leave a Reply