masthmagaa.com:

ಅಮೆರಿಕದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್​ಗೆ ಗುರುವಾರ ಒಂದೇ ದಿನ 1,169 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ದಿನ ಇಷ್ಟು ಜನ ಮೃತಪಟ್ಟಿರೋದು ಇದೇ ಮೊದಲು. ಈ ಮೂಲಕ ಅಮೆರಿಕದಲ್ಲಿ ಸಾವಿನ ಸಂಖ್ಯೆ 6,000ಕ್ಕೆ ಏರಿಕೆಯಾಗಿದೆ. ಜೊತೆಗೆ ಗುರುವಾರ 30 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇದು ಕೂಡ ಈವರೆಗಿನ ದಾಖಲೆಯಾಗಿದೆ. ಸದ್ಯ ಅಮೆರಿಕದಲ್ಲಿ 2 ಲಕ್ಷದ 50 ಸಾವಿರ ಜನರಿಗೆ ಕಾಯಿಲೆ ಹರಡಿದ್ದು, 9 ಸಾವಿರ ಜನ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈ ಕಾಯಿಲೆಯ ಕೇಂದ್ರಬಿಂದು ನ್ಯೂಯಾರ್ಕ್​ ಆಗಿದ್ದು, ಅಲ್ಲಿ 1,500ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ವಾಷಿಂಗ್ಟನ್, ಮಿಚಿಗನ್, ನ್ಯೂಜೆರ್ಸಿ, ಕ್ಯಾಲಿಫೋರ್ನಿಯಾಗಳು ತತ್ತರಿಸಿ ಹೋಗಿವೆ.

ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ಗೆ ಎರಡನೇ ಬಾರಿ ನಡೆದ ಕೊರೋನಾ ಟೆಸ್ಟ್​ನಲ್ಲೂ ನೆಗೆಟಿವ್ ಬಂದಿದೆ. ಇದನ್ನ ಸ್ವತಃ ಟ್ರಂಪ್ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಮಾರ್ಚ್​ ಮಧ್ಯಭಾಗದಲ್ಲಿ ಮೊದಲ ಬಾರಿ ಕೊರೋನಾ ಪರೀಕ್ಷೆ ನಡೆದಿತ್ತು.

-masthmagaa.com

Contact Us for Advertisement

Leave a Reply