ದೇಶದಲ್ಲಿ ಕೊರೋನಾ ಮಿಂಚಿನ ಓಟ! ಒಮೈಕ್ರಾನ್​​ ಅಟ್ಟಹಾಸ

masthmagaa.com:

ಭಾರತದಲ್ಲಿ ಕೊರೋನಾ ಮಿಂಚಿನ ಓಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 90,928 ಮಂದಿಗೆ ಕೊರೋನಾ ಸೋಂಕು ತಗುಲಿದೆ. ದೇಶದ ಪಾಸಿಟಿವಿಟಿ ದರ 6.43ಕ್ಕೆ ಏರಿಕೆಯಾಗಿದೆ. ಒಂದು ದಿನ ಹಿಂದೆ ಅಂದ್ರೆ ನಿನ್ನೆ 58 ಸಾವಿರ ಮಂದಿಗೆ ಸೋಂಕು ತಗುಲಿತ್ತು. ಆದ್ರೆ ಇವತ್ತು ನಿನ್ನೆಗಿಂತ 32 ಸಾವಿರ ಪ್ರಕರಣಗಳು ಹೆಚ್ಚಾಗಿವೆ. ದೆಹಲಿಯಲ್ಲಿ 15 ಸಾವಿರಕ್ಕೂ ಹೆಚ್ಚು, ಮುಂಬೈನಲ್ಲಿ ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೊರೋನಾ ಹೆಚ್ಚುತ್ತಿರೋದಕ್ಕೆ ಒಮೈಕ್ರಾನ್ ಕಾರಣ ಅಂತ ಕೂಡ ಹೇಳಲಾಗ್ತಿದೆ. ಒಂದೇ ದಿನ 495 ಮಂದಿಗೆ ಒಮೈಕ್ರಾನ್ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 2,630ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದ್ರೆ 797 ಮಂದಿಗೆ ಸೋಂಕು ತಗುಲಿದ್ರೆ, ದೆಹಲಿ ಎರಡನೇ ಸ್ಥಾನದಲ್ಲಿದ್ದು 465 ಮಂದಿಗೆ ಸೋಂಕು ತಗುಲಿದೆ. ದೆಹಲಿ ಮುಂಬೈ ಹೊರತುಪಡಿಸಿ ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರನ್ನು ಚಿಂತೆಗೆ ಕಾರಣವಾಗ್ತಿವೆ ಅಂತ ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ. ಇನ್ನು ದೇಶದ ಆರ್​ನಾಟ್ ವ್ಯಾಲ್ಯೂ 2.69 ಇದ್ದು, ಇದು ಈವರೆಗಿನ ಅತಿಹೆಚ್ಚಿನ ದರವಾಗಿದೆ. ಈ ಹಿಂದೆ ಅಂದ್ರೆ ಎರಡನೆ ಅಲೆಯಲ್ಲಿ ಪೀಕ್ ಇದ್ದಾಗಲೂ ಈ ದರ 1.69 ಮಾತ್ರ ಇತ್ತು.

-masthmagaa.com

Contact Us for Advertisement

Leave a Reply