ಕೊರೋನಾ ಹೋರಾಟದಲ್ಲಿ ಸಿಹಿಸುದ್ದಿ..! ಪ್ಲಾಸ್ಮಾ ಚಿಕಿತ್ಸೆ ಸಕ್ಸಸ್..!

masthmagaa.com:

ಕೊರೋನಾ ವೈರಸ್​​​​ಗೆ ಈವರೆಗೆ ಯಾವುದೇ ಔಷಧ ಪತ್ತೆಹಚ್ಚಿಲ್ಲ.. ಈ ನಡುವೆ ಇತ್ತೀಚೆಗಷ್ಟೇ ಪ್ಲಾಸ್ಮಾ ಚಿಕಿತ್ಸೆಯ ಮೂಲಕ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ಸಂಶೋಧನೆಯೊಂದು ತಿಳಿಸಿತ್ತು. ಅದರಂತೆ ಅಮೆರಿಕಾ ವೈದ್ಯರು ಐವರು ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ್ದು, ಯಶಸ್ವಿಯಾಗಿದ್ದಾರೆ. ಇವರಲ್ಲಿ ಭಾರತೀಯ ಮೂಲದ ಮೂವರೂ ಸೇರಿದ್ದಾರೆ.

ಅಮೆರಿಕದ ಹ್ಯೂಸ್ಟನ್​ನಲ್ಲಿರುವ ಬಾಲರ್ ಸೇಂಟ್ ಲ್ಯೂಕ್ಸ್ ವೈದ್ಯಕೀಯ ಕೇಂದ್ರದಲ್ಲಿ ಐವರು ಕೊರೋನಾ ರೋಗಿಗಳು ದಾಖಲಾಗಿದ್ದರು. ಈ ಐವರಿಗೂ ಪ್ಲಾಸ್ಮಾ ಚಿಕಿತ್ಸೆ ನೀಡಲಾಯ್ತು.. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವೈದ್ಯಕೀಯ ಕೇಂದ್ರದ ಉಪಾಧ್ಯಕ್ಷ ಅಶೋಕ್ ಬಾಲಸುಬ್ರಮಣ್ಯನ್ ಮಾತನಾಡಿ, ಕಾಲೇಜಿನಲ್ಲಿ ಕ್ಲಿನಿಕಲ್ ಟ್ರಯಲ್​ಗೆ ಅನುಮತಿ ಸಿಕ್ಕಿದ್ದು, ಮುಂದಿನ ವಾರ ಆರಂಭವಾಗಲಿದೆ. ಆದ್ರೆ ಅದಕ್ಕೂ ಮುನ್ನವೇ ಐವರು ಗುಣಮುಖರಾಗಿದ್ದಾರೆ. ಇವರಲ್ಲಿ ಮೂವರು ಭಾರತೀಯರಾಗಿದ್ದು, ಇಬ್ಬರು ಅಮೆರಿಕನ್ನರಾಗಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಅಶೋಕ್ ಬಾಲಸುಬ್ರಮಣ್ಯನ್, ಈಗ ನಾವು ಇವರ ರಕ್ತದಿಂದ ಪ್ಲಾಸ್ಮಾ ತೆಗೆದು ಬೇರೆ ಕೊರೋನಾ ಪೀಡಿತರ ಚಿಕಿತ್ಸೆಗೆ ಬಳಸುತ್ತೇವೆ. ಅವರು ಗುಣಮುಖರಾದ ಬಳಿಕ ಅವರ ರಕ್ತದಿಂದ ಪ್ಲಾಸ್ಮಾ ತೆಗೆದು ಬೇರೆಯವರ ಚಿಕಿತ್ಸೆಗೆ ಬಳಸುತ್ತೇವೆ. ಈ ಚೈನ್ ಇದೇ ರೀತಿ ಮುಂದುವರಿಯುತ್ತೆ ಅಂತ ಹೇಳಿದ್ದಾರೆ. ಅಲ್ಲದೆ ಕೊರೋನಾಗೆ ಔಷಧ ಕಂಡು ಹಿಡಿಯಲು 12ರಿಂದ 18 ತಿಂಗಳು ಬೇಕಾಗುತ್ತೆ. ಅಲ್ಲಿಯವರೆಗೆ ಕೊರೋನಾ ಪೀಡಿತರನ್ನು ಗುಣಪಡಿಸಲು ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ ಅಂತ ಹೇಳಿದ್ದಾರೆ.

ಏನಿದು ಪ್ಲಾಸ್ಮಾ ಥೆರಪಿ..?

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಂಡಿರುತ್ತದೆ. ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ತೆಗೆದು ಸೋಂಕಿತ ಅಥವಾ ಸೋಂಕು ತಗುಲುವ ಸಾಧ್ಯತೆ ಇರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತೆ. ಆಗ ಆತನಲ್ಲೂ ರೋಗ ನಿರೋಧಕ ಶಕ್ತಿ ರೂಪುಗೊಳ್ಳಲಿದೆ. ಇದರ ಫಲಿತಾಂಶ 3ರಿಂದ 7 ದಿನಗಳಲ್ಲಿ ಹೊರಬೀಳುತ್ತೆ. ಈ ಪ್ಲಾಸ್ಮಾ ಕಣಗಳು ಹಳದಿ ಬಣ್ಣದಾಗಿರುತ್ತವೆ.

ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದವರನ್ನು ಮೊದಲು ಸಂಪರ್ಕಿಸಿ ಕೌನ್ಸಿಲಿಂಗ್ ಮಾಡಲಾಗುತ್ತದೆ. ಬಳಿಕ ಅವರು ಸ್ವಯಂಪ್ರೇರಣೆಯಿಂದ ತಮ್ಮ ಪ್ಲಾಸ್ಮಾವನ್ನು ದೇಣಿಗೆ ನೀಡಬಹುದು. ಅದನ್ನ ಸಂಗ್ರಹಿಸಿಟ್ಟು ಅವಶ್ಯಕತೆ ಬಿದ್ದಾಗ ಗಂಭೀರವಾಗಿರುವ ರೋಗಿಗಳಿಗೆ ನೀಡಲಾಗುತ್ತದೆ.

-masthmagaa.com

Contact Us for Advertisement

Leave a Reply