ಕೊರೋನಾಗೆ CRPF ಯೋಧ ಬಲಿ.. 46 ಯೋಧರಿಗೆ ಸೋಂಕು..!

masthmagaa.com:

ದೆಹಲಿ: ಕೊರೋನಾ ವೈರಸ್​ಗೆ ದೆಹಲಿಯಲ್ಲಿ ಸಿಆರ್​ಪಿಎಫ್​ ಯೋಧ ಪ್ರಾಣ ಕಳೆದುಕೊಂಡಿದ್ದು, 46 ಯೋಧರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆ 1,000ಕ್ಕೂ ಹೆಚ್ಚು ಯೋಧರ ಸಂಪೂರ್ಣ ತುಕಡಿಯನ್ನ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಪೂರ್ವ ದೆಹಲಿಯ ಮಯೂರ್ ವಿಹಾರ್​ನಲ್ಲಿರುವ 31ನೇ ಸಿಆರ್​ಪಿಎಫ್​ ಬೆಟಾಲಿಯನ್​ನಲ್ಲಿ ಕಳೆದ ಎರಡು ದಿನಗಳಿಂದ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ನಿನ್ನೆ ಅಸ್ಸಾಂ ಮೂಲದ 55 ವರ್ಷದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಅವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕೂಡ ಇತ್ತು ಅನ್ನೋದು ಗೊತ್ತಾಗಿದೆ. ಇವರಿಗೆ ಏಪ್ರಿಲ್ 24ರಂದು ಕೊರೋನಾ ಸೋಂಕು ಇರೋದು ದೃಢಪಟ್ಟಿತ್ತು.

ಇತ್ತೀಚೆಗಷ್ಟೇ ಕೊರೋನಾ ವಿರುದ್ಧದ ಹೋರಾಟ ಘಟಕದಲ್ಲಿ ಅಸಿಸ್ಟೆಂಟ್​ ಆಗಿ ಸೇವೆ ಸಲ್ಲಿಸುತ್ತಿದ್ದ ಯೋಧರೊಬ್ಬರಲ್ಲಿ ಕಾಯಿಲೆ ಪತ್ತೆಯಾಗಿತ್ತು. ಅವರಿಂದಲೇ ಇತರರಿಗೂ ಕಾಯಿಲೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ 46 ಯೋಧರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಸೋಂಕಿತರನ್ನು ಪತ್ತೆಹಚ್ಚಲು ಹೆಚ್ಚೆಚ್ಚು ಪರೀಕ್ಷೆಗಳನ್ನ ನಡೆಸಲಾಗ್ತಿದೆ.

-masthmagaa.com
Contact Us for Advertisement

Leave a Reply