ಸಿಆರ್​​ಪಿಎಫ್ ಯೋಧನ ಸಾಹಸ.. ರೈಲಿನಿಂದ ಬೀಳುತ್ತಿದ್ದ ವ್ಯಕ್ತಿ ರಕ್ಷಣೆ..

ತಮಿಳುನಾಡು: ರೈಲ್ವೆ ಸ್ಟೇಷನ್​​ನಲ್ಲಿ ರೈಲು ಹತ್ತುವಾಗ ರೈಲಿನ ಕೆಳಗೆ ಬೀಳುತ್ತಿದ್ದ ವ್ಯಕ್ತಿಯೊಬ್ಬರನ್ನು ಸಿಆರ್​ಪಿಎಫ್ ಯೋಧರು ರಕ್ಷಿಸಿದ್ದಾರೆ. ಕೊಯಂಬತ್ತೂರು ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ವಿಟ್ಟರ್​ನಲ್ಲಿ ಶೇರ್ ಮಾಡಲಾಗಿದೆ. ಯೋಧನ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿ ಒಂದು ರೈಲು ಕೊಯಂಬತ್ತೂರ್​ ರೈಲ್ವೆ ನಿಲ್ದಾಣದಿಂದ ಹೊರಟಿದೆ. ಈ ವೇಳೆ ರೈಲು ಹತ್ತಲು ಹೋದ ಪ್ರಯಾಣಿಕನೊಬ್ಬ ಜಾರುತ್ತಾನೆ. ಈ ವೇಳೆ ಸಿಆರ್​ಪಿಎಫ್ ಯೋಧರೊಬ್ಬರು ವ್ಯಕ್ತಿಯನ್ನು ರೈಲಿನ ಒಳಗೆ ತಳ್ಳಿದ್ದಾರೆ.

Contact Us for Advertisement

Leave a Reply