ಮೆಕ್ಕಾ, ಮದೀನಾದಲ್ಲಿ ಕರ್ಫ್ಯೂ ಹೇರಿದ ಸೌದಿ ಅರೇಬಿಯಾ..!

masthmagaa.com:

ಕೊರೋನಾ ವೈರಸ್​ ವಿರುದ್ಧದ ಹೋರಾಟದ ಭಾಗವಾಗಿ ಸೌದಿ ಅರೇಬಿಯಾ ಸರ್ಕಾರ ಮುಸ್ಲಿಮರ ಪವಿತ್ರ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾ ಮೇಲೆ 24 ಗಂಟೆಗಳ ಕರ್ಫ್ಯೂ ಹೇರಿದೆ. ಈ ಎರಡು ನಗರಗಳ ಜನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಕಾರುಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನರನ್ನ ಕರೆದುಕೊಂಡು ಹೋಗುವಂತಿಲ್ಲ ಅಂತ ಆದೇಶಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಇದುವರೆಗೆ 1,800ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹರಡಿದ್ದು, 21 ಜನ ಮೃತಪಟ್ಟಿದ್ದಾರೆ. ಗಲ್ಫ್​ ಕೋಆಪರೇಷನ್ ಕೌನ್ಸಿಲ್ (ಜಿಸಿಸಿ) ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾದಲ್ಲೇ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಕೊರೋನಾ ವೈರಸ್ ಹರಡುವುದನ್ನ ತಡೆಗಟ್ಟಲು ಸೌದಿ ಅರೇಬಿಯಾ ಈಗಾಗಲೇ ಅಂತಾರಾಷ್ಟ್ರೀಯ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ವಾರ್ಷಿಕ ಉಮ್ರಾ ಯಾತ್ರೆಯನ್ನ ಸ್ಥಗಿತಗೊಳಿಸಿ, ಸಾಕಷ್ಟು ಸಾರ್ವಜನಿಕ ಸ್ಥಳಗಳನ್ನ ಬಂದ್ ಮಾಡಿದೆ.  ರಿಯಾದ್, ಮೆಕ್ಕಾ, ಮದೀನಾ ಮತ್ತು ಜೆದ್ದಾ ನಗರಗಳ ಪ್ರವೇಶ ಮತ್ತು ನಿರ್ಗಮನವನ್ನ ಸೀಮಿತಗೊಳಿಸಲಾಗಿದೆ.

Contact Us for Advertisement

Leave a Reply