ಸೋಂಕು ಹರಡುವುದನ್ನ ಕಡಿಮೆ ಮಾಡಿದ ಶುದ್ಧ ಗಾಳಿ..!

masthmagaa.com:

ಕೊರೋನಾ ವೈರಸ್ ನಿಯಂತ್ರಣಕ್ಕೆ ತರಲು ದೇಶದಲ್ಲಿ ಲಾಕ್​ಡೌನ್ ಹೇರಿರೋದ್ರಿಂದ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಕೈಗಾಗರಿಕಾ ಚಟುವಟಿಕೆಗಳು ಬಹತೇಕ ಸ್ತಬ್ಧವಾಗಿದೆ. ಇದರಿಂದ ದೇಶದಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು ಸೋಂಕು ಹರಡುವುದು ಕೂಡ ನಿಧಾನವಾಗಿದೆ ಅಂತ ತಜ್ಞರು ಹೇಳಿದ್ದಾರೆ.

ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಯ ಚೆಸ್ಟ್ ಸರ್ಜರಿ ಸೆಂಟರ್​ನ ಅಧ್ಯಕ್ಷ ಡಾ. ಅರವಿಂದ ಕುಮಾರ್ ಪ್ರಕಾರ, ಈಗಾಗಲೇ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರೇ ಕೊರೋನಾ ವೈರಸ್​ಗೆ ಬಲಿಯಾಗುತ್ತಿದ್ದಾರೆ. ಅಂತಹ ಕಾಯಿಲೆಗಳಿಗೆ ವಾಯು ಮಾಲಿನ್ಯ ಕೂಡ ಒಂದು ಕಾರಣ. ಉದಾಹರಣೆಗೆ ವಾಯು ಮಾಲಿನ್ಯದಿಂದ ಶ್ವಾಸಕೋಶದ ಕಾಯಿಲೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚಾಗುತ್ತದೆ ಅನ್ನೋದು ಅಧ್ಯಯನಗಳಲ್ಲಿ ಗೊತ್ತಾಗಿದೆ ಎಂದಿದ್ದಾರೆ.

ಇದೀಗ ವಾಯು ಮಾಲಿನ್ಯ ಕಡಿಮೆಯಾಗಿರೋದ್ರಿಂದ ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಅಸ್ತಮಾ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಶೇ.30ರಿಂದ 40 ರಷ್ಟು ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ ಜಗತ್ತಿನಾದ್ಯಂತ 42 ಲಕ್ಷ ಮಂದಿ ವಾಯು ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ.

-masthmagaa.com

Contact Us for Advertisement

Leave a Reply