ರಾಜ್ಯ ಸರ್ಕಾರದ ಆಸ್ಪತ್ರೆಗಳು ದೆಹಲಿ ಜನತೆಗೆ ಮೀಸಲು: ಕೇಜ್ರಿವಾಲ್

masthmagaa.com:

ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನೇದಿನೆ ಹೆಚ್ಚಾಗ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ನಡೆಸುತ್ತಿರುವ ಎಲ್ಲಾ ಆಸ್ಪತ್ರೆಗಳನ್ನ ಕೇವಲ ದೆಹಲಿ ನಿವಾಸಿಗಳಿಗೆ ಮಾತ್ರ ಮೀಸಲಿಡುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಘೋಷಿಸಿದ್ದಾರೆ. ಅಲ್ಲದೆ ನ್ಯೂರೋ ಸರ್ಜರಿ ಸೇರಿದಂತೆ ಕೆಲವೊಂದು ಸರ್ಜರಿಗಳನ್ನ ಮಾಡುವ ಖಾಸಗಿ ಆಸ್ಪತ್ರೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ಖಾಸಗಿ ಆಸ್ಪತ್ರೆಗಳು ಕೂಡ ದೆಹಲಿ ಜನರಿಗೆ ಮೀಸಲಿಡುವುದಾಗಿ ಹೇಳಿದ್ದಾರೆ.

ದೆಹಲಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಬೆಡ್​​ಗಳ ಕೊರತೆ ಉಂಟಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ರೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಅವಕಾಶವಿರುತ್ತದೆ ಎಂದಿದ್ದಾರೆ. ಇದರ ಜೊತೆಗೆ ಹೊರ ರಾಜ್ಯದವರು ದೆಹಲಿಗೆ ಬಂದ್ರೆ ಆಸ್ಪತ್ರೆ​ಗಳು ತುಂಬಿ ಹೋಗುತ್ತವೆ ಅನ್ನೋ ಲೆಕ್ಕಾಚಾರದಲ್ಲಿ ರಾಜ್ಯದ ಗಡಿಯನ್ನ ಸೀಲ್ ಮಾಡಲಾಗಿತ್ತು. ಆದ್ರೀಗ ಅದನ್ನ ಕೂಡ ತೆರೆಯುವುದಾಗಿ ಕೇಜ್ರಿವಾಲ್​ ಹೇಳಿದ್ದಾರೆ.

ಇನ್ನು ವೃದ್ಧರಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುವುದರಿಂದ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಇತರರ ಜೊತೆ ಹೆಚ್ಚು ಮಾತನಾಡಬಾರದು. ಅದ್ರಲ್ಲೂ ಮಕ್ಕಳ ಬಳಿ ಹೆಚ್ಚು ಮಾತನಾಡಬಾರದು. ಸಾಧ್ಯವಾದ್ರೆ ಮನೆಯ ಒಂದೇ ಕೋಣೆಯಲ್ಲಿ ಇರುವಂತೆ ವೃದ್ಧರಿಗೆ ಸಲಹೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply