masthmagaa.com:

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಒಂದು ತಿಂಗಳ ಹಿಂದೆ ಇಡೀ ದೇಶಕ್ಕೆ ಮಾದರಿಯಾಗಿದ್ದ ರಾಜಧಾನಿ ಬೆಂಗಳೂರು ಈಗ ಕೊರೋನಾ ಹಾಟ್​ಸ್ಪಾಟ್​ ಆಗಿ ಪರಿವರ್ತನೆಯಾಗಿದೆ. ಉಳಿದಂತೆ ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ, ಮೈಸೂರು, ಧಾರವಾಡ, ಉಡುಪಿ ಜಿಲ್ಲೆಗಳಲ್ಲೂ ಸೋಂಕಿನ ಹಾವಳಿ ಜೋರಾಗಿದೆ.

ರಾಜ್ಯದಲ್ಲಿ ಇದುವರೆಗೆ 2,000ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾವಾರು ಸಾವಿನ ಪ್ರಮಾಣದ ಪಟ್ಟಿಯಲ್ಲಿ ಯಾದಗಿರಿ, ಬೆಂಗಳೂರು ಗ್ರಾಮಾಂತರ ಮತ್ತು ಉಡುಪಿ ಜಿಲ್ಲೆಗಳು ಮೊದಲ 3 ಸ್ಥಾನದಲ್ಲಿದ್ದು ಕಡಿಮೆ ಡೆತ್ ರೇಟ್​ ಹೊಂದಿವೆ. ಕೊನೆಯ 3 ಸ್ಥಾನದಲ್ಲಿರುವ ಮೈಸೂರು, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಜಾಸ್ತಿ ಇದೆ.

ಜಿಲ್ಲಾವಾರು ಸಾವಿನ ಪ್ರಮಾಣ:

1. ಯಾದಗಿರಿ – 0.1% (100 ಸೋಂಕಿತರಲ್ಲಿ ಒಬ್ಬರಿಗಿಂತಲೂ ಕಡಿಮೆ ಸಾವು)

2. ಬೆಂಗಳೂರು ಗ್ರಾಮಾಂತರ – 0.5%

3. ಉಡುಪಿ – 0.6%

4. ಮಂಡ್ಯ – 0.7%

5. ಚಾಮರಾಜನಗರ  – 1% (100 ಸೋಂಕಿತರಲ್ಲಿ 1 ಸಾವು)

6. ಉತ್ತರ ಕನ್ನಡ  – 1.1%

7. ಚಿತ್ರದುರ್ಗ  – 1.1%

8. ವಿಜಯಪುರ – 1.1%

9. ರಾಯಚೂರು – 1.2%

10. ರಾಮನಗರ – 1.2%

11. ಬಳ್ಳಾರಿ – 1.3%

12. ಶಿವಮೊಗ್ಗ – 1.5%

13. ಕೊಡಗು – 1.7%

14. ಕಲಬುರಗಿ  – 1.7%

15. ಕೋಲಾರ  – 1.8%

16. ಕೊಪ್ಪಳ – 1.9%

17. ಬೆಂಗಳೂರು ನಗರ – 1.9%

18. ಚಿಕ್ಕಬಳ್ಳಾಪುರ – 2.1%

19. ಬೆಳಗಾವಿ  – 2.2%

20. ದಕ್ಷಿಣ ಕನ್ನಡ – 2.3%

21. ಗದಗ  – 2.3%

22. ದಾವಣಗೆರೆ  – 2.4%

23. ಚಿಕ್ಕಮಗಳೂರು – 2.5%

24. ಹಾಸನ  – 2.7%

25. ಹಾವೇರಿ – 2.7%

26. ಬಾಗಲಕೋಟೆ  – 3% (100 ಸೋಂಕಿತರಲ್ಲಿ 3 ಸಾವು)

27. ಧಾರವಾಡ – 3.1%

28. ತುಮಕೂರು  – 3.2%

29. ಬೀದರ್ – 3.5%

30. ಮೈಸೂರು  – 3.6%

ಒಟ್ಟಾರೆಯಾಗಿ ಕರ್ನಾಟದಲ್ಲಿ ಸಾವಿನ ಪ್ರಮಾಣವು 1.9% ಇದೆ. ಅಂದ್ರೆ 100 ಸೋಂಕಿತರಲ್ಲಿ ಹತ್ತಿರ ಹತ್ತಿರ ಇಬ್ಬರು ಸೋಂಕಿತರು ಮೃತಪಡುತ್ತಿದ್ದಾರೆ. ದೇಶದಲ್ಲಿ ಸಾವಿನ ಪ್ರಮಾಣ 2.2% ಇದೆ ಅನ್ನೋದು ಕೂಡ ಗಮನಾರ್ಹ.

-masthmagaa.com

Contact Us for Advertisement

Leave a Reply