ಚೀನಾದಲ್ಲಾದ ಸಾವಿನ ಬಗ್ಗೆ ಡೊನಾಲ್ಡ್​ ಟ್ರಂಪ್​ಗೂ ಅನುಮಾನ..!

masthmagaa.com:

ಕೊರೋನಾ ಮಹಾಮಾರಿಗೆ ಇಡೀ ವಿಶ್ವವೇ ಸ್ತಬ್ಧವಾಗಿದೆ. ಆದ್ರೆ ಈ ಕಾಯಿಲೆ ಮೊದಲು ಕಾಣಿಸಿಕೊಂಡ ಚೀನಾ ಮಾತ್ರ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಚೀನಾದಲ್ಲಿ ಕೊರೋನಾ ಸೋಂಕಿತರು ಹಾಗೂ ಅದರಿಂದ ಮೃತಪಟ್ಟವರ ಸಂಖ್ಯೆ ಬಗ್ಗೆ ಎಲ್ಲರಿಗೂ ಅನುಮಾನ ಇದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ.

ಚೀನಾ ಸರ್ಕಾರ ಹೇಳುವ ಪ್ರಕಾರ ತನ್ನ ದೇಶದಲ್ಲಿ ಸುಮಾರು 80 ಸಾವಿರ ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಈ ಪೈಕಿ 76 ಸಾವಿರ ಜನ ಗುಣಮುಖರಾಗಿದ್ದು, 3 ಸಾವಿರ ಮಂದಿ ಮೃತಪಟ್ಟಿದ್ದಾರೆ. ಆದ್ರೆ ಚೀನಾದಲ್ಲೇ ಹುಟ್ಟಿಕೊಂಡ ಕಾಯಿಲೆಗೆ ಇಷ್ಟು ಕಡಿಮೆ ಸಂಖ್ಯೆಯಲ್ಲಿ ಚೀನಿಯರು ಸಾವನ್ನಪ್ಪಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಅಂತ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪೂರಕವೆಂಬಂತೆ ವುಹಾನ್​ನಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಸುಮಾರು 42,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರಂತೆ.

ಇದರ ನಡುವೆ ಇತ್ತೀಚೆಗಷ್ಟೇ ಚೀನಾ ಅಧ್ಯಕ್ಷ ಜಿನ್​ಪಿಂಗ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಬಗ್ಗೆ ಮಾಹಿತಿ ನೀಡಿದ ಟ್ರಂಪ್, ಕಾಯಿಲೆ ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸಿದ್ದೇನೆ. ಆದ್ರೆ ಚೀನಾದಲ್ಲಾದ ಸಾವಿನ ಸಂಖ್ಯೆ ಅಥವಾ ಸೋಂಕಿತರ ಸಂಖ್ಯೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply