ಭಾರತಕ್ಕೆ ಹೋಗಿ ಬಂದ ಬಳಿಕ ಜನಸ್ತೋಮ ನೋಡಿದ್ರೆ ಆಶ್ಚರ್ಯವಾಗ್ತಿಲ್ಲ: ಟ್ರಂಪ್

ದಕ್ಷಿಣ ಕೆರೋಲಿನಾ: ಭಾರತ ಪ್ರವಾಸ ಮುಗಿಸಿ ಅಮೆರಿಕಾಗೆ ವಾಪಸ್ ತೆರಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಕ್ಷಿಣ ಕೆರೋಲಿನಾದಲ್ಲಿ ರ್ಯಾಲಿ ನಡೆಸಿದ್ರು. ಈ ವೇಳೆ ಭಾರತ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದರು. ಪ್ರಧಾನಿ ನರೇಂದ್ರ ಮೋದಿ ಓರ್ವ ಮಹಾನ್ ವ್ಯಕ್ತಿ. ಇಡೀ ದೇಶದ ಜನ ಮೋದಿಯವರನ್ನು ಪ್ರೀತಿಸುತ್ತಾರೆ. ಮೋಟೆರಾ ಸ್ಟೇಡಿಯಂನಲ್ಲಿ 1 ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ನನಗೆ ಎಷ್ಟೇ ಜನ ಸೇರಿದ್ರು ಯಾವುದೇ ರೀತಿಯ ಆಶ್ಚರ್ಯ ಆಗ್ತಿಲ್ಲ ಅಂತ ಹೇಳಿದ್ದಾರೆ.

ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಆದ್ರೆ ಇಲ್ಲಿ 35 ಕೋಟಿ ಜನಸಂಖ್ಯೆ ಇದೆ. ನನಗೆ ಅಲ್ಲಿನ ಜನಸ್ತೋಮ ಮತ್ತು ಇಲ್ಲಿನ ಜನಸ್ತೋಮ ಎರಡೂ ಇಷ್ಟ. ಭಾರತದ ಜನ ತುಂಬಾ ಪ್ರೀತಿಯನ್ನು ಹೊಂದಿದ್ದಾರೆ. ಅಲ್ಲದೆ ಅದ್ಭುತ ನಾಯಕನನ್ನು ಹೊಂದಿದ್ದಾರೆ. ಜೊತೆಗೆ ಅಮೆರಿಕಾದ ಪ್ರಜೆಗಳ ಮೇಲೂ ಅಲ್ಲಿನ ಜನ ಅಪಾರವಾದ ಪ್ರೀತಿ ಹೊಂದಿದ್ದಾರೆ. ಭಾರತ ಪ್ರವಾಸ ಸಾರ್ಥಕವಾಗಿದೆ ಅಂತ ಹೇಳಿದ್ದಾರೆ.

Contact Us for Advertisement

Leave a Reply