ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸಂಬಂಧ ಕಟ್: ಟ್ರಂಪ್ ಘೋಷಣೆ

masthmagaa.com:

ಚೀನಾದ ಕೈಗೊಂಬೆ ರೀತಿ ವರ್ತಿಸುತ್ತಿರೋ ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ಎಲ್ಲಾ ಸಂಬಂಧಗಳನ್ನ ಕಡಿದುಕೊಳ್ಳುತ್ತಿದ್ದೇವೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಗೆ ವಾರ್ಷಿಕವಾಗಿ 40 ಮಿಲಿಯನ್ ಡಾಲರ್ ಕೊಡುತ್ತಿರುವ ಚೀನಾ ಅದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ. ಆದ್ರೆ ಅಮೆರಿಕ ಸುಮಾರು 450 ಮಿಲಿಯನ್ ಡಾಲರ್ ಕೊಡುತ್ತಿದೆ.

ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಕೆಲವೊಂದು ಸುಧಾರಣೆಗಳನ್ನ ಮಾಡಿಕೊಳ್ಳುವಂತೆ ನಾವು ಹೇಳಿದ್ದೆವು. ಆದ್ರೆ ಅದನ್ನು ನಿರಾಕರಿಸಲಾಗಿದೆ. ನಾವು ಸೂಚಿಸಿದ ಸುಧಾರಣೆಗಳನ್ನ ಅಳವಡಿಸಿಕೊಳ್ಳಲು ವಿಫಲವಾದ ಹಿನ್ನೆಲೆ ನಾವು ಇವತ್ತು ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ಎಲ್ಲಾ ಸಂಬಂಧಗಳನ್ನ ಕಡಿದುಕೊಳ್ಳುತ್ತಿದ್ದೇವೆ. ಅದಕ್ಕೆ ನೀಡುತ್ತಿದ್ದ ಹಣವನ್ನು ಜಾಗತಿಕ ತುರ್ತು ಆರೋಗ್ಯ ಅವಶ್ಯಕತೆಗಾಗಿ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ದೇಣಿಗೆಯನ್ನ ಅಮೆರಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಬಳಿಕ WHO ಮಹಾನಿರ್ದೇಶಕ ಟೆಡ್ರೋಸ್ ಅಧನಾಮ್​​ಗೆ ಪತ್ರ ಬರೆದಿದ್ದ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ರು. ಅಲ್ಲದೆ 30 ದಿನದೊಳಗೆ ಸುಧಾರಣೆಗಳನ್ನ ಮಾಡಿಕೊಳ್ಳದಿದ್ದರೆ ದೇಣಿಗೆಯನ್ನ ಶಾಶ್ವತವಾಗಿ ಸ್ಥಗಿತಗೊಳಿಸಬೇಕಾಗುತ್ತದೆ ಅಂತ ಎಚ್ಚರಿಸಿದ್ದರು. ಆದ್ರೀಗ 30 ದಿನದೊಳಗೇ ಸಂಬಂಧ ಕಡಿದುಕೊಳ್ಳಲು ಅಮೆರಿಕ ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply