ಫೆಬ್ರವರಿವರೆಗೆ ಸಿಬಿಎಸ್​​ಇ ಪರೀಕ್ಷೆ ಇಲ್ಲ: ರಮೇಶ್ ಪೋಖ್ರಿಯಾಲ್

masthmagaa.com:

ದೆಹಲಿ: ಸೆಂಟ್ರಲ್ ಬೋರ್ಡ್​ ಆಫ್ ಸೆಕೆಂಡರಿ ಎಜುಕೇಶನ್ ಅಂದ್ರೆ ಸಿಬಿಎಸ್​​​​ಇ ಪರೀಕ್ಷೆಗಳನ್ನು ಫೆಬ್ರವರಿ ಅಂತ್ಯದವರೆಗೂ ನಡೆಸೋದಿಲ್ಲ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ಧಾರೆ.

ಇಂದು ಶಿಕ್ಷಕರೊಂದಿಗೆ ಸಂವಾದ ನಡೆಸಿದ ಅವರು, ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಿಬಿಎಸ್​​ಇ ಪರೀಕ್ಷೆ ಬಗ್ಗೆ ಕೇಳುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಫೆಬ್ರವರಿವರೆಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ನಂತರದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಅದು ಕೂಡ ಫುಲ್ ಸಿಲೆಬಸ್ ಇರಲ್ಲ. ಶೇ.30ರಷ್ಟು ಸಿಲೇಬಸ್​ ಕಡಿಮೆ ಮಾಡಲಾಗತ್ತೆ. ಕೆಲ ಶಾಲೆಗಳು ಗ್ರಾಮೀಣ ಭಾಗದಲ್ಲಿರೋದ್ರಿಂದ ಆನ್​ಲೈನ್ ಪರೀಕ್ಷೆ ನಡೆಸಕ್ಕಾಗಲ್ಲ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply